ಹಾವೇರಿ: ತಾಲೂಕಿನ ಯಲಗಚ್ಚ ಮತ್ತು ಹೊಸರಿತ್ತಿ ಮಧ್ಯೆ ಆರು ಕಿ. ಮೀ ಹೊಸ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಆದರೆ ರಸ್ತೆ ನಿರ್ಮಿಸಿ 15 ದಿನಗಳಾಗುವ ಮುನ್ನವೇ ಡಾಂಬರ್ ಕಿತ್ತು ಬರುತ್ತಿದೆ ಎಂದು ಯಲಗಚ್ಚು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಗುತ್ತಿಗೆದಾರನಿಗೆ ತಿಳಿಸಲು ಹೋದರೆ ನಮ್ಮ ಮೇಲೆಯೇ ಹಲ್ಲೆ ಮಾಡಲು ಬಂದಿದ್ದ ಎಂದು ಆರೋಪಿಸಿರುವ ಗ್ರಾಮಸ್ಥರು, ರಸ್ತೆ ನಿರ್ಮಿಸಿ ಕೇವಲ 15 ದಿನಗಳಾಗಿದೆ ಅಷ್ಟೇ. ಇದು ವರ್ಷಪೂರ್ತಿ ಇರುತ್ತೋ, ಇಲ್ಲವೊ? ಎಂಬ ಆತಂಕ ಶುರುವಾಗಿದೆ ಎನ್ನುತ್ತಿದ್ದಾರೆ. ಈ ಕೂಡಲೇ ಗುತ್ತಿಗೆದಾರನ ಪರವಾನಗಿ ರದ್ಧತಿ ಮಾಡಬೇಕು ಮತ್ತು ರಸ್ತೆಯನ್ನ ಹೊಸದಾಗಿ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಳೆದ ಹಲವು ವರ್ಷಗಳ ಹಿಂದಿನಿಂದಲೂ ಈ ರಸ್ತೆ ಹದೆಗಟ್ಟಿತ್ತು. ಕಾಮಗಾರಿ ಆರಂಭವಾಗುತ್ತಿದ್ದಂತೆ ತಮ್ಮ ಸಮಸ್ಯೆ ಬಗೆಹರಿಯಿತು ಅಂತಾ ಗ್ರಾಮಸ್ಥರು ನಿಟ್ಟಿಸಿರುಬಿಟ್ಟಿದ್ದರು.
ಇದನ್ನೂ ಓದಿ: ಆ್ಯಂಬುಲೆನ್ಸ್ ಟೆಂಡರ್ ರದ್ದು: ಪ್ರಮಾಣ ಪತ್ರ ಸಲ್ಲಿಸುವಂತೆ ಸಚಿವ ಸುಧಾಕರ್‌ಗೆ ಹೈಕೋರ್ಟ್ ಸೂಚನೆ