ETV Bharat / state

ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮೈತುಂಬಾ ಬಾಸುಂಡೆ ಬರುವಂತೆ ಥಳಿಸಿದ ವಾಚ್​ಮ್ಯಾನ್

author img

By

Published : Aug 20, 2022, 9:31 PM IST

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಿಡೇನೂರ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಹಣ ಕದ್ದಿದ್ದಾನೆ ಎಂಬ ಶಂಕೆ ಮೇರೆಗೆ ವಾಚ್​ಮ್ಯಾನ್​ನೊಬ್ಬ ವಿದ್ಯಾರ್ಥಿಗೆ ಮೈತುಂಬಾ ಬಾಸುಂಡೆ ಬರುವಂತೆ ಥಳಿಸಿದ್ದಾರೆ.

residential-school-student-was-beaten-by-watchman-in-haveri
ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಮೈತುಂಬಾ ಬಾಸುಂಡೆ ಬರುವಂತೆ ಥಳಿಸಿದ ವಾಚ್​ಮ್ಯಾನ್

ಹಾವೇರಿ: ಶಾಲೆಯ ವಾಚ್​ಮ್ಯಾನ್​ನೊಬ್ಬ ಆರನೇ ತರಗತಿ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿರುವ ಪ್ರಕರಣ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೇನೂರ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿ ಪ್ರಜ್ವಲ್ ಗಂಗಮ್ಮನವರ ಎಂಬಾತನೇ ಥಳಿತಕ್ಕೆ ಒಳಗಾದ ವಿದ್ಯಾರ್ಥಿ. ಆರೋಪಿ ವಾಚ್​ಮ್ಯಾನ್​ ನಾಗರಾಜ್ ಸುತ್ತಕೋಟಿ ತಲೆಮರೆಸಿಕೊಂಡಿದ್ದಾರೆ.

ವಸತಿ ನಿಲಯಕ್ಕೆ ಮೂರು ದಿನಗಳ ಹಿಂದೆ ನೇಮಕವಾಗಿರುವ ವಾಚ್​ಮ್ಯಾನ್​ ನಾಗರಾಜ್ ಅವರು ವಿದ್ಯಾರ್ಥಿ ಮೈಮೇಲೆ ಹಸೆಕಟ್ಟಿಗೆ, ಕಸಬರಿಗೆ ಸೇರಿದಂತೆ ವಿವಿಧ ವಸ್ತುಗಳಿಂದ ಥಳಿಸಿದ್ದಾರೆ. ಈ ಥಳಿತಕ್ಕೆ ಪ್ರಜ್ವಲ್ ಕೈಕಾಲು, ಬೆನ್ನು ಮೇಲೆ ರಕ್ತ ಹೆಪ್ಪುಗಟ್ಟಿದ ಕಲೆಗಳಾಗಿವೆ.

ಪ್ರಜ್ವಲ್ ಕಳೆದ 15 ದಿನಗಳ ಹಿಂದಷ್ಟೇ ವಸತಿ ನಿಲಯಕ್ಕೆ ಆರನೇ ತರಗತಿಗೆ ಸೇರ್ಪಡೆಯಾಗಿದ್ದಾನೆ. ಪ್ರಜ್ವಲ್ ತಂದೆ ಬ್ಯಾಡಗಿ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಪೌರಕಾರ್ಮಿಕ ಕೋಟಾದಲ್ಲಿ ನೇಮಕವಾಗಿದ್ದಾನೆ. ಆರೋಪಿ ನಾಗರಾಜ ಸುತ್ತಕೋಟಿ ಹಳೇಶಿಡೇನೂರು ಗ್ರಾಮದವನಾಗಿದ್ದು, ಹೊರಗುತ್ತಿಗೆ ಮೇಲೆ ವಸತಿ ನಿಲಯದ ವಾಚ್​ಮ್ಯಾನ್​ ಆಗಿ ನೇಮಕವಾಗಿದ್ದಾರೆ.

ಹಲ್ಲೆಗೆ ಕಾರಣವೇನು?: ಪ್ರಜ್ವಲ್ ಜೊತೆ ಆತನ ಸಹೋದರ ಮತ್ತು ಪರಿಚಿತರು ಕೂಡ ವಸತಿ ನಿಲಯಕ್ಕೆ ಸೇರ್ಪಡೆಯಾಗಿದ್ದಾರೆ. ಇತ್ತ, ಆರೋಪಿ ನಾಗರಾಜ್ ಹಣ ಕಳೆದುಕೊಂಡಿದ್ದು, ಅದನ್ನು ಪ್ರಜ್ವಲ್ ಕದ್ದಿದ್ದಾನೆ ಎಂದು ಆರೋಪಿಸಿ ಈ ರೀತಿ ಥಳಿಸಿದ್ದಾರೆ ಎನ್ನಲಾಗ್ತಿದೆ.

ಇಷ್ಟೆಲ್ಲಾ ಆದರೂ ಸಹ ಶಾಲಾ ಸಿಬ್ಬಂದಿ ಪೋಷಕರಿಗೆ ಈ ಬಗ್ಗೆ ತಿಳಿಸಿಲ್ಲ. ತೀವ್ರವಾಗಿ ಥಳಿತಕ್ಕೊಳಗಾದ ಪ್ರಜ್ವಲ್ ವಸತಿ ನಿಲಯದಲ್ಲಿ ಇದ್ದುಕೊಂಡು ಪೋಷಕರಿಗೆ ಮೊಬೈಲ್ ಕರೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು ವಸತಿ ನಿಲಯಕ್ಕೆ ಆಗಮಿಸಿ, ಬ್ಯಾಡಗಿ ತಾಲೂಕಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ.

ಮೈತುಂಬಾ ಬಾಸುಂಡೆಗಳಾಗಿರುವ ವಿಚಾರ ತಿಳಿಸದ ಶಾಲಾ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಕುರಿತಂತೆ ಪ್ರಜ್ವಲ್ ತಂದೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ನಾಗರಾಜ್ ನಾಪತ್ತೆಯಾಗಿದ್ದಾರೆ. ಸದ್ಯ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ವಿಚಾರಣೆಗೆಂದು ಬಂದಿದ್ದ ಭೂಗತ ಪಾತಕಿ ಧಾರವಾಡದ ಲಾಡ್ಜ್​​ನಲ್ಲಿ ಪ್ರೇಯಸಿಯೊಂದಿಗೆ ಸರಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.