ETV Bharat / state

ಬೈಕ್ ಸವಾರರ ಅನಾವಶ್ಯಕ ತಿರುಗಾಟ : ಬೈಕ್ ನೂಕಿಸಿ ದಣಿಸಿದ ಪೊಲೀಸರು

author img

By

Published : May 10, 2021, 3:49 PM IST

Updated : May 10, 2021, 7:45 PM IST

ಲಾಕ್​ಡೌನ್ ಕುರಿತು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಮಾತನಾಡಿ, ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಮಾಡಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ..

bike
bike

ರಾಣೆಬೆನ್ನೂರು : ಕಠಿಣ ಲಾಕ್​ಡೌನ್ ನಿಯಮ ಉಲ್ಲಂಘನೆ ಮಾಡಿ ರಸ್ತೆಗೆ ಇಳಿದಿದ್ದ ಬೈಕ್ ಸವಾರರಿಗೆ ರಾಣೆಬೆನ್ನೂರು ಪೊಲೀಸರು ಒಂದು ಕಿ.ಮೀ. ಬೈಕ್ ನೂಕಿಸಿ ಪರೇಡ್ ಮಾಡಿಸಿದ್ದಾರೆ.

ರಾಜ್ಯ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ಕಠಿಣ ಲಾಕ್​ಡೌನ್ ನಿಯಮ ಜಾರಿಗೆ ತಂದಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ವಾಹನಗಳಲ್ಲಿ ಬರಬಾರದು ಎಂದು ತಿಳಿಸಿದೆ.

ಆದರೂ ರಾಣೆಬೆನ್ನೂರಲ್ಲಿ ಕೆಲವರು ನಿಯಮ ಉಲ್ಲಂಘಿಸಿ ಬೈಕ್​ನಲ್ಲಿ ಬಂದಿದ್ದನ್ನು ಕಂಡ ಪೊಲೀಸರು ಬೈಕ್ ಸವಾರರನ್ನು ನಿಲ್ಲಿಸಿ ಅವರನ್ನು ಬೈಕ್​ನಿಂದ ಕೆಳಗೆ ಇಳಿಸಿ ಸುಮಾರು ಒಂದು ಕಿ.ಮೀ. ತಳ್ಳಿಸಿ ಅವರನ್ನು ದಂಡಿಸಿದ್ದಾರೆ.

ಬೈಕ್ ನೂಕಿಸಿ ಪರೇಡ್ ಮಾಡಿಸಿದ ಪೊಲೀಸರು

ಅಲ್ಲದೆ ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ಸುಮಾರು 200 ಬೈಕ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ಲಾಕ್​ಡೌನ್ ಕುರಿತು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಮಾತನಾಡಿ, ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಮಾಡಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಈ ನಡುವೆ ಯಾವೊಬ್ಬ ಸಾರ್ವಜನಿಕರು ಹೊರಗಡೆ ಬರಬಾರದು ಎಂದು ಜನರಿಗೆ ಮನವಿ ಮಾಡಿದರು. ನಂತರ ಅಧಿಕಾರಿಗಳು ನಗರದಲ್ಲಿ ಜಾಥಾ ಮಾಡುವ ಮೂಲಕ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದರು.

Last Updated : May 10, 2021, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.