ETV Bharat / state

ರಾಣೆಬೆನ್ನೂರಲ್ಲಿ ಶಿವಾಜಿ ಮಹಾರಾಜರ ಪೋಷಾಕಿನಲ್ಲಿ ಗಮನ ಸೆಳೆದ ಗಣಪ - Vande Mataram Swayam Seva Sanga

ಮಹಾರಾಷ್ಟ್ರ ರಾಜ್ಯದ ರಾಯಗಡ ಕೋಟೆ ಮಾದರಿಯಲ್ಲಿ ನಿರ್ಮಾಣವಾಗಿರುವ ವೇದಿಕೆ ಜನರನ್ನು ಆಕರ್ಷಿಸುತ್ತಿದ್ದು, ಶಿವಾಜಿ ಮಹಾರಾಜರ ಆಳ್ವಿಕೆಯನ್ನು ಬಿಂಬಿಸುತ್ತಿದೆ. ಕೋಟೆಯ ಜತೆಗೆ ಸೈನಿಕರು, ಅಶ್ವದಳ, ಗಜದಳ ನೋಡುಗರಿಗೆ ಇತಿಹಾಸದ ನೆನಪು ತಂದುಕೊಡುತ್ತಿದೆ.

ರಾಣೆಬೆನ್ನೂರ ಕಾ ರಾಜ ಗಣಪ
author img

By

Published : Sep 8, 2019, 7:36 PM IST

ರಾಣೆಬೆನ್ನೂರು: ಛತ್ರಪತಿ ಶಿವಾಜಿ ಮಹಾರಾಜರನ್ನು ಹೋಲುವಂತೆ ಇಪ್ಪತ್ತೊಂದು ಅಡಿ ಎತ್ತರದಲ್ಲಿ ರೂಪಿತಗೊಂಡ ರಾಣೆಬೆನ್ನೂರು ನಗರದ ಗಣೇಶ ಮೂರ್ತಿ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ನಗರಸಭಾ ಮೈದಾನದಲ್ಲಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಘ 11ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಗಣೇಶ ಮೂರ್ತಿ ಹಾಗೂ ಕೋಟೆಯ ಥರದ ವೇದಿಕೆಗೆ ಸುಮಾರು ಮೂವತ್ತು ಲಕ್ಷ ಖರ್ಚು ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯದ ರಾಯಗಡ ಕೋಟೆ ಮಾದರಿಯಲ್ಲಿ ನಿರ್ಮಾಣವಾಗಿರುವ ವೇದಿಕೆ ಜನರನ್ನು ಆಕರ್ಷಿಸುತ್ತಿದ್ದು, ಶಿವಾಜಿ ಮಹಾರಾಜರ ಆಳ್ವಿಕೆಯನ್ನು ಬಿಂಬಿಸುತ್ತಿದೆ. ಕೋಟೆಯ ಜತೆಗೆ ಸೈನಿಕರು, ಅಶ್ವದಳ, ಗಜದಳ ನೋಡುಗರಿಗೆ ಇತಿಹಾಸ ನೆನಪು ತಂದುಕೊಡುತ್ತಿದೆ.

ರಾಣೆಬೆನ್ನೂರ ಕಾ ರಾಜ ಗಣಪ

ವಂದೇ ಮಾತರಂ ಸ್ವಯಂ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ಹಿಂದೂ ಸಾಮ್ರಾಜ್ಯದ ರೂವಾರಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಹಾಗೂ ಅವರ ಸಾಧನೆಯನ್ನು ಬಿಂಬಿಸಬೇಕು ಎಂಬ ಕನಸಿತ್ತು. ಗಣೇಶ ಹಬ್ಬದ ಸಂದರ್ಭದಲ್ಲಿ ಶಿವಾಜಿ ಮಹಾರಾಜರ ಸಾಮ್ರಾಜ್ಯದ ಕೋಟೆ, ಸೈನಿಕರು, ಅಶ್ವದಳ, ಗಜದಳಗಳನ್ನು ಮಾಡುವ ಮೂಲಕ ನಮ್ಮ ಕನಸನ್ನು ಈಡೇರಿಸಿಕೊಂಡಿದ್ದೇವೆ ಎಂದರು.

ಸ್ಥಳೀಯರಾದ ಸಂಗೀತ ದೊಡ್ಡಮನಿ ಮಾತನಾಡಿ, ರಾಣೆಬೆನ್ನೂರ ಕಾ ರಾಜಾ ಗಣಪನನ್ನು ನೋಡಲು ಬಂದಿದ್ದೀವಿ. ಇಲ್ಲಿ ಶಿವಾಜಿ ಮಹಾರಾಜರ ಕೋಟೆ, ಸೈನಿಕರು, ಆಶ್ವದಳಗಳನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಹಿಂದಿನ ಕಾಲದ ಇತಿಹಾಸ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದರು.

Intro:ರಾಣೆಬೆನ್ನೂರ ಕಾ ರಾಜಾ ಗಣಪ್ಪ ಹಿಂದೂ ಸಾಮ್ರಾಜ್ಯದ ದೊರೆಯಾಗಿ ಆಕರ್ಷಣೆ..

ರಾಣೆಬೆನ್ನೂರ: ಹಿಂದೂ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಆಕರ್ಷಣೆಯಲ್ಲಿ ಇಪ್ಪತ್ತೊಂದು ಅಡಿ ಎತ್ತರದಲ್ಲಿ ರೂಪಿತಗೊಂಡ ಗಣೇಶ ರಾಣೆಬೆನ್ನೂರ ನಗರದ ಕೇಂದ್ರ ಬಿಂದುವಾಗಿ ಸೆಳೆಯುತ್ತಿದೆ.
ನಗರಸಭಾ ಮೈದಾನದಲ್ಲಿ ನಿರ್ಮಾಣವಾಗಿರುವ ವಿಘ್ಞ ನಿವಾರಕ ಮನಮೋಹಕವಾಗಿ ಕೂತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಘದ ಅಡಿಯಲ್ಲಿ 11 ನೇ ವರ್ಷದ ಗಣೇಶಶೋತ್ಸವದಲ್ಲಿ, ಈ ಬಾರಿ ಛತ್ರಪತಿ ಶಿವಾಜಿ ಮಹರಾಜರ ಮಾದರಿಯ ಗಣಪತಿ ಹಾಗೂ ಕೋಟೆ ವೇದಿಕೆಗೆ ಸುಮಾರು ಮೂವತ್ತು ಲಕ್ಷ ಖರ್ಚು ಮಾಡಲಾಗಿದೆ.
Body:Look..
ಮಹಾರಾಷ್ಟ್ರ ರಾಜ್ಯದ ರಾಯಗಡ ಕೋಟೆ ಮಾದರಿಯಲ್ಲಿ ನಿರ್ಮಾಣವಾಗಿರುವ ವೇದಿಕೆ ಜನರನ್ನು ಆಕರ್ಷಿಸುತ್ತಿದೆ. ನೊಡುಗರುಗೆ ಹಿಂದಿನ ಕಾಲದಲ್ಲಿ ಶಿವಾಜಿ ಮಹಾರಾಜರು ಕೋಟೆಯಲ್ಲಿ ಆಳ್ವಿಕೆ ಹೇಗೆ ಇರುತಿತ್ತು ಎಂಬುದನ್ನು ಸ್ಮರಿಸುತ್ತದೆ.
ಕೋಟೆಯ ಮುಂಬಾಗ ಬೃಹತ್ ಕೇಸರಿ ದ್ವಜ ಹಿಂದೂ ಸಾಮ್ರಾಜ್ಯದ ಸಂಕೇತ ಬಿಂಬಿಸುವಂತ್ತದೆ. ಇದರ ಜತೆಗೆ ಸೈನಿಕರು, ಅಶ್ವದಳ, ಗಜದಳ ನೋಡುಗರಿಗೆ ಹಿಂದಿನ ಕಾಲದ ಇತಿಹಾಸ ನೆನಪು ತಂದುಕೊಡುತ್ತದೆ. ಶಿವಾಜಿ ಮಹಾರಾಜರ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಅವರ ಜೀವನ ಸಾಧನೆಯ ಬರಹಗಳನ್ನು ಸಹ ಬಿತ್ತರಿಸುವ ಮೂಲಕ ನೋಡುಗರನ್ನು ಹಿಂದಿನ ಇತಿಹಾಸ ನೆನಪಿಸುತ್ತದೆ.Conclusion:Byte..01
ಪ್ರಕಾಶ ಬುರಡಿಕಟ್ಟಿ, ಅಧ್ಯಕ್ಷರು ವಂದೇ ಮಾತರಂ ಸ್ವಯಂ ಸೇವಾ ಸಂಘ.
ಹಿಂದೂ ಸಾಮ್ರಾಜ್ಯದ ರೂವಾರಿ ಛತ್ರಪತಿ ಶಿವಾಜಿ ಮಹಾರಾಜರು ಜೀವನ ಚರಿತ್ರೆ ಹಾಗೂ ಅವರ ಸಾಧನೆಯನ್ನು ಬಿಂಬಿಸಬೇಕು ಎಂಬ ಕನಸ್ಸು ಇತ್ತು. ಅದನ್ನು ಗಣೇಶ ಹಬ್ಬದ ಆಚರಣೆಯ ಮೂಲಕ ಕೋಟೆ, ಸೈನಿಕರು, ಅಶ್ವದಳ, ಗಜದಳ ಮಾಡುವ ಮೂಲಕ ಶಿವಾಜಿ ಮಹಾರಾಜರ ಸಾಮ್ರಾಜ್ಯ ಮಾದರಿ ರೂಪವನ್ನು ಮಾಡಲಾಗಿದೆ.

Byte-02
ಸಂಗೀತಾ ದೊಡ್ಡಮನಿ, ಸ್ಥಳಿಯ
ನಗರದಲ್ಲಿ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ವೇದಿಕೆಯ ಮೇಲೆ ಗಣೇಶ ಇಡಲಾಗಿದೆ. ಜತೆಗೆ ಹಿಂದೂ ಸಾಮ್ರಾಜ್ಯದ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಹುಟ್ಟ, ಬೆಳವಣಿಗೆ, ಅವರ ಹೋರಾಟದ ಬಗ್ಗೆ ಜೀವನ ಸಾಧನೆ ಇಲ್ಲಿರುವುದು ಇಲ್ಲಿ ತೋರಿಸಲಾಗಿದೆ. ಇದರಿಂದ ಇತಿಹಾಸ ತಿಳಿಯಲು ಇಲ್ಲಿ ಸಹಾಯಕವಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.