ರಾಣೆಬೆನ್ನೂರು/ಹಾವೇರಿ:ಉಪಸಮರದಲ್ಲಿ ಬಿಜೆಪಿ ಪಕ್ಷ ರಾಣೆಬೆನ್ನೂರು ಕ್ಷೇತ್ರದಲ್ಲಿ ಅಧಿಕಾರದಲ್ಲಿರುವ ಕಾರಣ ಯಾವುದಾದರೂ ಒಂದು ಸ್ಥಾನವನ್ನು ವಹಿಸಿಕೊಳ್ಳುವುದಕ್ಕೆ ಸ್ಥಳೀಯ ಮುಖಂಡರು ತೆರೆ ಹಿಂದೆ ಕಸರತ್ತು ಮಾಡುತ್ತಿದ್ದಾರೆ.
ಸದ್ಯ ಬಿಜೆಪಿ ಪಕ್ಷದಲ್ಲಿ ಗ್ರಾಮೀಣ ಘಟಕ ಹಾಗೂ ನಗರ ಘಟಕ ಅಧ್ಯಕ್ಷ ಸ್ಥಾನಗಳ ಮೂರು ವರ್ಷದ ಅಧಿಕಾರವಾಧಿ ಈ ತಿಂಗಳಾಂತ್ಯ ಮುಕ್ತಾಯಗೊಳ್ಳಲಿದೆ. ಈಗ ನೂತನ ಅಧ್ಯಕ್ಷರ ಆಯ್ಕೆಗೆ ಬಹಳ ಕಸರತ್ತು ನಡೆಯತ್ತಿದ್ದು, ಅಧಿಕಾರಕ್ಕಾಗಿ ಪೈಪೋಟಿ ಮಾಡುತ್ತಿದ್ದಾರೆ. ಕಳೆದ ಬಾರಿ ನಗರ ಘಟಕ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ದಕ್ಕಿದ್ದರೆ, ಗ್ರಾಮೀಣ ಘಟಕ ಸ್ಥಾನ ಲಿಂಗಾಯತ ವರ್ಗದ ಪಾಲಾಗಿತ್ತು. ಈಗ ಮತ್ತೆ ನೂತನ ಅಧ್ಯಕ್ಷರಗಳ ಆಯ್ಕೆ ಬಿಜೆಪಿ ಜಿಲ್ಲಾಧ್ಯಕ್ಷರ ಅಂಗಳಕ್ಕೆ ಬಿದ್ದಿದು, ಪಕ್ಷ ಯಾರ ಕೈಗೆ ಅಧಿಕಾರ ನೀಡುತ್ತದೆ ಎಂಬದು ಗೌಪ್ಯವಾಗಿದೆ.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಿಗುವುದೇ ಅವಕಾಶ?
ಬಿಜೆಪಿ ಪಕ್ಷದಲ್ಲಿ ಈ ಬಾರಿ ಹಿಂದುಳಿದ ಸಮುದಾಯದ ಮತಗಳು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಿವೆ. ತಾಲೂಕಿನ ಎಸ್ಸಿ, ಎಸ್ಟಿ ಮತಗಳು ಕೂಡ ಬಿಜೆಪಿ ಬೆಂಬಲಿಸಿವೆ. ಈ ಹಿನ್ನೆಲೆ ಬಿಜೆಪಿ ನಗರ ಘಟಕ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷ ಸ್ಥಾನಗಳು ತಮಗೆ ಸಿಗಬಹುದು ಎಂಬುದು ಸಮುದಾಯದ ಮುಖಂಡರಲ್ಲಿ ಆಸೆ ಮೂಡಿಸಿದೆ. ಆದರೆ, ಪಕ್ಷ ಈ ಬಾರಿ ಯಾವ ಸಮುದಾಯಕ್ಕೆ ಮಣೆ ಹಾಕುತ್ತದೆ ಎಂಬುದು ಸಹ ತಿಳಿಯದಂತಾಗಿದೆ.
ಯುವಕರ ಪೈಪೋಟಿ!: ಬಿಜೆಪಿ ಹೈಕಮಾಂಡ್ ಸದ್ಯದ ಸ್ಥಿತಿಯಲ್ಲಿ ಯುವಕರಿಗೆ ಮಣೆ ಹಾಕುತ್ತಿದ್ದು, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಹೆಚ್ಚಾಗಿ ಯುವಕರಿಗೆ ಆದ್ಯತೆ ನೀಡುತ್ತಿದೆ. ಈಗ ನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ದೀಪಕ ಹರಪನಹಳ್ಳಿ ಮತ್ತು ಸಿದ್ದು ಚಿಕ್ಕಬಿದರಿ ಹೆಸರು ಮುನ್ನಲಗೆ ಬಂದಿವೆ. ಗ್ರಾಮೀಣ ಘಟಕ ಅಧ್ಯಕ್ಷ ಸ್ಥಾನಕ್ಕೆ ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ ಹಾಗೂ ಬಸವರಾಜ ಕೇಲಗಾರ ಹೆಸರು ಜೋರಾಗಿ ಕೇಳು ಬರುತ್ತಿವೆ. ಆದರೆ, ಮುಖಂಡರು ಯಾರಿಗೆ ಮಣೆ ಹಾಕ್ತಾರೆ ಎಂಬು ಕಾದು ನೋಡಬೇಕಾಗಿದೆ.