ರಾಣೆಬೆನ್ನೂರು: ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಣೆಬೆನ್ನೂರು ಯುವಕ 582 ನೇ ರ‍್ಯಾಂಕ್ ಪಡೆದಿದ್ದಾರೆ.
ನಗರದ ಪೃಥ್ವಿ ಸತ್ಯನಾರಾಯಣ ಹುಲ್ಲತ್ತಿ ಎಂಬ ಯುವಕ 2019 ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 582 ರ‍್ಯಾಂಕ್ ಪಡೆದಿದ್ದಾರೆ. ಪೃಥ್ವಿ ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಮೆಕಾನಿಕಲ್ ಎಂಜನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ.
2018 ರಲ್ಲಿ ಪ್ರಥಮ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದೆ. ಆಗ ಪಾಸ್ ಆಗಿರಲಿಲ್ಲ. 2019 ರಲ್ಲಿ ನಡೆದ ಪರೀಕ್ಷೆಯಲ್ಲಿ ಸತತ ಓದು ಮತ್ತು ಛಲದಿಂದ 582 ನೇ ರ‍್ಯಾಂಕ್ ಬರಲು ಸಾಧ್ಯವಾಗಿದೆ ಎಂದು ಪೃಥ್ವಿ ಹೇಳಿದ್ದಾರೆ.