ಹಾವೇರಿ: ಜಿಲ್ಲಾ ಕಾರಾಗೃಹ ಹಾವೇರಿ ಅಧೀಕ್ಷಕ ಮತ್ತು ಸಿಬ್ಬಂದಿ ನಡುವಿನ ವೈಮನಸ್ಸು ಮುಂದುವರಿದಿದ್ದು, ಇಬ್ಬರ ನಡುವೆ ಗಲಾಟೆ ನಡೆದಿದೆ. ಅಧೀಕ್ಷಕ ತಿಮ್ಮಣ್ಣ ಭಜಂತ್ರಿ ವಿರುದ್ಧ ಜೈಲು ಸಿಬ್ಬಂದಿ ಕೆಲಕಾಲ ಜೈಲ್‌ನಿಂದ ಹೊರನಿಂತು ಅಸಮಾಧಾನ ವ್ಯಕ್ತಪಡಿಸಿದರು.
ಹೀಗಾಗಿ ಹಾವೇರಿ ಜಿಲ್ಲಾ ಕಾರಾಗೃಹದ ಈ ಘಟನೆಯ ಬಗ್ಗೆ ತನಿಖೆ ನಡೆಸಲು ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಅವರನ್ನ ನೇಮಿಸಲಾಗಿದೆ. ಈ ಹಿನ್ನೆಲೆ ರಂಗನಾಥ್ ಹಾವೇರಿ ಕಾರಾಗೃಹಕ್ಕೆ ಭೇಟಿ ನೀಡಿ, ಗಲಾಟೆ ಕುರಿತು ಮಾಹಿತಿ ಪಡೆದರು. ಸೋಮವಾರ ಬೆಳಗ್ಗೆ ಹಾವೇರಿ ಜಿಲ್ಲಾ ಕಾರಾಗೃಹದ ಅಧೀಕ್ಷಕ ತಿಮ್ಮಣ್ಣ ಭಜಂತ್ರಿ ಮತ್ತು ಸಿಬ್ಬಂದಿ ಪುಂಡಲೀಕ್ ಪವಾರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಓದಿ:ಹಾವೇರಿ ಕಾರಾಗೃಹದಲ್ಲಿ ಜೈಲು ಅಧೀಕ್ಷಕ ಮತ್ತು ಜೈಲು ಸಿಬ್ಬಂದಿ ನಡುವೆ ಡಿಶುಂ.. ಡಿಶುಂ!
ಇಬ್ಬರೂ ಪರಸ್ಪರ ಹಲ್ಲೆ, ಜೀವ ಬೆದರಿಕೆ ಅವಾಚ್ಯಶಬ್ದಗಳ ನಿಂದನೆ ಕುರಿತಂತೆ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಿಮ್ಮಣ್ಣ ಭಜಂತ್ರಿ ವರ್ತನೆಗೆ ಜೈಲು ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದರು. ಕೆಲಕಾಲ ಕರ್ತವ್ಯಕ್ಕೆ ಹಾಜರಾಗದೇ ಕಾರಾಗೃಹದ ಹೊರಗೆ ನಿಂತು ಅಸಮಾಧಾನ ವ್ಯಕ್ತಪಡಿಸಿದ್ದರು.