ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಅವರ ಪಾರ್ಥೀವ ಶರೀರ ಬರೋದನ್ನು ಎದುರು ನೋಡುತ್ತಿದ್ದಾರೆ ಕುಟುಂಬಸ್ಥರು. ಪಾರ್ಥೀವ ಶರೀರ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಇಂದು ಪಾರ್ಥೀವ ಶರೀರ ಬರೋದರ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯಿಂದ, ಭಾರತ ಸರ್ಕಾರದಿಂದ ಮಾಹಿತಿ ಸಿಗುವ ನಿರೀಕ್ಷೆಯಿದೆ ಎಂದು ಮೃತ ನವೀನ್ ದೊಡ್ಡಪ್ಪ ಉಜ್ಜನಗೌಡ ಗ್ಯಾನಗೌಡರ ತಿಳಿಸಿದರು.
ಸ್ವಾಮೀಜಿಗಳ ಹೇಳಿದಂತೆ ವೀರಶೈವ ಸಂಪ್ರದಾಯದಂತೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ್ ನಿವಾಸದ ಎದುರು ಮೂರು ದಿನದ ಕಾರ್ಯ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿಲಾಯಿತು. ನವೀನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ವೇಳೆ ನವೀನ ನೆನೆದು ಕುಟುಂಬಸ್ಥರು ಕಣ್ಣೀರು ಹಾಕಿದರು.
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿರುವ ತುಮಕೂರಿನ ವಿದ್ಯಾರ್ಥಿ.. ಕುಟುಂಬಸ್ಥರು ಹೇಳೋದೇನು?
ರಷ್ಯಾ-ಉಕ್ರೇನ್ ನಡುವಿನ ಮಿಲಿಟರಿ ಸಂಘರ್ಷದಲ್ಲಿ ಮಂಗಳವಾರದಂದು ಮೃತಪಟ್ಟಿರುವ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹವನ್ನು ಭಾರತಕ್ಕೆ ತರಲು ಅನೇಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.