ETV Bharat / state

ಬಡವರಿಗೆ ನ್ಯಾಯ ಕೊಡಿಸಲು ನ.4 ರಂದು ಪ್ರತಿಭಟನೆಗೆ ಸಜ್ಜಾದ ಪ್ರಣವಾನಂದ ಸ್ವಾಮೀಜಿ - Ranebennur latest news

ಬಡ ಜನರಿಗೆ ನ್ಯಾಯ ಕೊಡಿಸಲು ಹೋದರೆ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಕೊಲೆ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ, ಬಡ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಪ್ರಣವಾನಂದ ಸ್ವಾಮೀಜಿ ಖಡಕ್ಕಾಗಿ ಹೇಳಿದ್ದಾರೆ.

ಪ್ರಣವಾನಂದ ಸ್ವಾಮೀಜಿ
author img

By

Published : Nov 1, 2019, 7:47 PM IST

ರಾಣೆಬೆನ್ನೂರು: ಬಡಜನರಿಗೆ ನಿವೇಶನ ಜಾಗ ನೀಡಲು ಹಿಂದೇಟು ಹಾಕುತ್ತಿರುವ ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮ ಪಂಚಾಯತ್​ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಶರಣ ಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣವಾನಂದ ಸ್ವಾಮೀಜಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ಬಡ ಜನರು ನಿವೇಶನವಿಲ್ಲದೆ ಜೋಪಡಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಗ್ರಾಮ ಪಂಚಾಯತ್ ಇವರಿಗೆ ಗ್ರಾಮದ ಪಕ್ಕದಲ್ಲಿರುವ ಸರ್ಕಾರದ ಜಮೀನಿನ ಜಾಗ ನೀಡಲು ಹಿಂದೇಟು ಹಾಕುತ್ತಿದೆ. ಇದರಿಂದ ಬಡ ಹಾಗೂ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದರು. ಬಡವರಿಗೆ ಭೂಮಿ ಕೊಡಿಸುವ ಸಲುವಾಗಿ ತಾಲೂಕು ಪಂಚಾಯತ್​ ಮುಂದೆ ನ.4 ರಂದು ಬೃಹತ್ ಪ್ರತಿಭಟನೆ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಬಂಜಾರ ಪೀಠದ ಸರ್ದಾರ ಸೇವಲಾಲ ಸ್ವಾಮೀಜಿ, ಮೌಲಿ ಸೈಯದ್ ಹಾಶಿಮ್ ಫೀರಾ, ಪಾದ್ರಿ ಇಮಾನುಲಾ ಸುರಣಗಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಣವಾನಂದ ತಿಳಿಸಿದರು.

Intro:KN_RNR_02_PRANAVANAND SWAMIJI PROTEST_KAC10001.

ಅ.04 ರಂದು ಪ್ರಣವಾನಂದ ಸ್ವಾಮಿಜಿಯಿಂದ ಬೃಹತ್ ಪ್ರತಿಭಟನೆ..

ರಾಣೆಬೆನ್ನೂರ: ಬಡಜನರಿಗೆ ನಿವೇಶನ ಜಾಗ ನೀಡಲು ಹಿಂದೇಟು ಹಾಕುತ್ತಿರುವ ರಾಣೆಬೆನ್ನೂರ ತಾಲೂಕಿನ ಆರೇಮಲ್ಲಾಪುರ ಗ್ರಾಮ ಪಂಚಾಯತಿ ವಿರುದ್ದ ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಶರಣಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮಿಜಿ ತಿಳಿಸಿದ್ದಾರೆ.

Body:ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಣೆಬೆನ್ನೂರ ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ಬಡ ಜನರು ನಿವೇಶನವಿಲ್ಲದೆ ಜೋಪಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಗ್ರಾಮ ಪಂಚಾಯತ ಇವರಿಗೆ ಗ್ರಾಮದ ಪಕ್ಕದಲ್ಲಿರುವ ಸರ್ಕಾರದ ಜಮೀನಿನ ಜಾಗ ನೀಡಲು ಹಿಂದೇಟು ಹಾಕುತ್ತಿದೆ. ಇದರಿಂದ ಬಡ ಹಾಗೂ ಸಾಮನ್ಯ ಜನರಿಗೆ ತೊಂದರೆಯಾಗುತ್ತಿದ್ದು, ಇವರಿಗೆ ಭೂಮಿ ನೀಡಿಸುವ ಸಲುವಾಗಿ ತಾಲೂಕು ಪಂಚಾಯತ ಎದರುಗಡೆ ಅ.04 ರಂದು ಬೃಹತ್ ಪ್ರತಿಭಟನೆ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Conclusion:ಈ ಪ್ರತಿಭಟನೆಯಲ್ಲಿ ಕಾಳಿಮಠದ ಋಷಿಕುಮಾರ ಸ್ವಾಮುಜಿ, ಬಂಜಾರ ಪೀಠದ ಸರ್ದಾರ ಸೇವಲಾಲ ಸ್ವಾಮಿಜಿ, ಮೌಲಿ ಸೈಯದ್ ಹಾಶಿಮ್ ಫೀರಾ, ಪಾದ್ರಿ ಇಮಾನುಲಾ ಸುರಣಗಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು

ಕೊಲೆ ಬೆದರಿಕೆ...
ಬಡ ಜನರಿಗೆ ನ್ಯಾಯ ಕೊಡಿಸಲು ಹೋದರೆ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಕೊಲೆ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ, ಬಡ ಜನರ ಪರವಾಗಿ ಕೆಲಸ ಮಾಡುತ್ತೆನೆ ಎಂದು ಶ್ರೀ ಪ್ರಣವಾನಂದ ಸ್ವಾಮಿಜಿ ಖಡಕ್ಕಾಗಿ ಹೇಳಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.