ಹಾವೇರಿ: ಹಾನಗಲ್ ತಾಲೂಕಿನ ಆಡೂರು ಪೊಲೀಸರು ಕಾರ್ಯಾಚರಣೆ ನಡೆಸಿ 7 ಜೀವಂತ ನಾಡ ಬಾಂಬ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಡ ಬಾಂಬ್ ಇಟ್ಟಿದ್ದ ಆರೋಪದಡಿ ದುರ್ಗಪ್ಪ ತುರಬಿಗುಡ್ಡ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಡು ಹಂದಿ ಬೇಟೆಯಾಡುವ ಉದ್ದೇಶದಿಂದ ಕುಸನೂರು ಅರಣ್ಯ ಪ್ರದೇಶದಲ್ಲಿ ಈತ ನಾಡ ಬಾಂಬ್‌ಗಳನ್ನು ಇಟ್ಟಿದ್ದ. ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
![police taken 7 country made bomb into custody in haveri](https://etvbharatimages.akamaized.net/etvbharat/prod-images/03-12-2023/kn-hvr-02-local-bomb-7202143_03122023164321_0312f_1701602001_788.jpg)
ಪ್ರತ್ಯೇಕ ಪ್ರಕರಣ- ಖಾಸಗಿ ಫೋಟೋ ಸೆರೆಹಿಡಿದು ಬ್ಲ್ಯಾಕ್ಮೇಲ್ ಮಾಡಿದ ಯುವಕನ ಬಂಧನ: ಇತ್ತೀಚಿಗೆ, ಬಟ್ಟೆ ಅಂಗಡಿಗೆ ಬಂದಿದ್ದ ಯುವತಿಯ ಖಾಸಗಿ ಫೋಟೋ ತೆಗೆದು ಬ್ಲ್ಯಾಕ್ಮೇಲ್ ಮಾಡಿದ್ದ ಆರೋಪಿಯನ್ನು ಜಿಲ್ಲೆಯ ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದರು. ಮೈನುದ್ದೀನ್ ಮುಂಡಗೋಡ ಬಂಧೀತ ಆರೋಪಿ. ಹಾನಗಲ್ ತಾಲೂಕಿನ ಗ್ರಾಮವೊಂದರ ಯುವತಿ ಬಟ್ಟೆ ಖರೀದಿಗಾಗಿ ಹಾನಗಲ್ ಪಟ್ಟಣದಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದಳು. ಈ ಸಂದರ್ಭದಲ್ಲಿ ಟ್ರಯಲ್ ರೂಮಿನಲ್ಲಿ ಇದ್ದಾಗ ಯುವತಿಯ ಅರಿವಿಗೆ ಬಾರದಂತೆ ಆಕೆಯ ಖಾಸಗಿ ಫೋಟೋವನ್ನು ಆರೋಪಿ ಮೈನುದ್ದೀನ ಸೆರೆಹಿಡಿದಿದ್ದ. ಬಳಿಕ ಯುವತಿಗೆ ಕರೆ ಮಾಡಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ದೂರು ನೀಡಲಾಗಿತ್ತು.
ಅಲ್ಲದೇ, ಯುವತಿಯ ಮೊಬೈಲ್ ಕರೆ ಮಾಡಿರುವ ಆರೋಪಿ, ಆಕೆಗೆ ನಗ್ನವಾಗಿ ವಿಡಿಯೋ ಕಾಲ್ ಮಾಡುವಂತೆ ಬೆದರಿಸಿ ಕಿರುಕುಳ ನೀಡಿದ್ದಾನೆ. ಜೊತೆಗೆ, ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿರುವ ಯುವಕ, ಯುವತಿ ಕಡೆಯಿಂದ 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಕಿತ್ತುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ: ವಿಜಯಪುರ: ದೇಹ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ