ರಾಣೆಬೆನ್ನೂರು: ರಾಜ್ಯದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ ಇತ್ತ ತಾಲೂಕಿನ ಜನರು ಸಾಮಾಜಿಕ ಅಂತರ ಮರೆತು ತಮ್ಮ ಕೆಲಸಕ್ಕೆ ಮುಂದಾಗುತ್ತಿದ್ದಾರೆ.
ನಗರದಲ್ಲಿರುವ ಯೂನಿಯನ್ ಬ್ಯಾಂಕ್ ಎದುರು ಸಾರ್ವಜನಿಕರು ತಮ್ಮ ಕೆಲಸಕ್ಕೆ ಬಂದಿದ್ದು, ಸಾಮಾಜಿಕ ಅಂತರವನ್ನು ಮರೆತು ನಿಂತಿದ್ದಾರೆ. ಬ್ಯಾಂಕ್ ಎದುರಗಡೆ ಭದ್ರತಾ ಸಲಹೆಗಾರರಿದ್ದರೂ ಹಾಗೂ ಅವರು ಮನವಿ ಮಾಡಿಕೊಂಡರೂ ಕಿವಿಗೊಡದೇ ಸಾಮಾಜಿಕ ಅಂತರವನ್ನು ಉಲ್ಲಂಘನೆ ಮಾಡಿದ್ದಾರೆ.
ಮಹಾಮಾರಿ ವೈರಸ್ ತಡೆಯಲು ರಾಜ್ಯ ಸರ್ಕಾರವು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಆದೇಶ ಹೊರಡಿಸಿದೆ. ಆದರೆ, ತಾಲೂಕಿನ ಜನರು ಮಾತ್ರ ಆದೇಶವನ್ನು ದಿಕ್ಕರಿಸುತ್ತಿದ್ದಾರೆ.