ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದ ಬಫರ್ ಜೋನ್ನಲ್ಲಿ ಮಟನ್ ಮಾರಾಟ ನಡೆಸಲಾಗುತ್ತಿದ್ದು, ಬಂದ್ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಗ್ರಾಮದ ಕೆಳಗಿನ ಓಣಿಯಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಸುತ್ತಮುತ್ತಲಿನ ಇನ್ನೂರು ಮೀಟರ್ವರೆಗಿನ ಪ್ರದೇಶವನ್ನ ಬಫರ್ ಜೋನ್ ಎಂದು ಘೋಷಿಸಲಾಗಿದೆ.
ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದ ಮಟನ್ ಅಂಗಡಿ ಮಾಲೀಕರು. ರಾಜಾರೋಷವಾಗಿ ಮಟನ್ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯರು ಮಟನ್ ಶಾಪ್ಗೆ ತೆರಳಿ ಬಂದ್ ಮಾಡುವಂತೆ ಹೇಳಿದ್ದಕ್ಕೆ ಸ್ಥಳೀಯರ ಜೊತೆ ಅಂಗಡಿಯವರು ಮಾತಿನ ಚಕಮಕಿ ನಡೆಸಿದ್ದಾರೆ.