ETV Bharat / state

ಹಾವೇರಿ: ವಿದ್ಯುತ್ ಬಳಕೆದಾರರಿಂದ ಎಂದಿನಂತೆ ಕರೆಂಟ್​ ಬಿಲ್ ಪಾವತಿ - ಜಿಲ್ಲೆಯಲ್ಲಿ ವರ್ಷಕ್ಕೆ ಒಂದು ಕುಟುಂಬ ಸರಾಸರಿ

ಹಾವೇರಿ ಜಿಲ್ಲೆಯಲ್ಲಿ ಕಳೆದ ಏಪ್ರಿಲ್​ನಲ್ಲಿ 12.95 ಕೋಟಿ ವಿದ್ಯುತ್ ಬಿಲ್ ಆಗಿದ್ದು, ಅದರಲ್ಲಿ 12.30 ಕೋಟಿ ರೂ ಬಿಲ್ ಈಗಾಗಲೇ ಪಾವತಿಯಾಗಿದೆ.

payment-of-electricity-bill-as-usual-by-the-electricity-user-in-haveri
ಹಾವೇರಿ: ವಿದ್ಯುತ್ ಬಳಕೆದಾರರಿಂದ ಎಂದಿನಂತೆ ಕರೆಂಟ್​ ಬಿಲ್ ಪಾವತಿ
author img

By

Published : May 20, 2023, 10:58 PM IST

ಹಾವೇರಿ: ಕಾಂಗ್ರೆಸ್ ಸರ್ಕಾರ ನೀಡಿರುವ ಪ್ರತಿಮನೆಗೆ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್​ ಯೋಜನೆ ಈಗಾಗಲೇ ತೀವ್ರ ಚರ್ಚೆಗೆ ಗ್ರಾಸವಾಗಿದ್ದು. ರಾಜ್ಯದ ಕೆಲವು ಕಡೆ ಜನರು ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆ, ನಾವು ಕರೆಂಟ್​ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಇಂಧನ ಇಲಾಖೆಯ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಇನ್ನು ಕೆಲವೆಡೆ ಸರ್ಕಾರ ಯಾವ ಮಾನದಂಡಗಳನ್ನ ಅನುಸರಿಸುತ್ತೆ ಎಂದು ಎದುರು ನೋಡುತ್ತಿದ್ದಾರೆ.

ಆದರೆ ಹಾವೇರಿ ಜಿಲ್ಲೆಯಲ್ಲಿ ಮಾತ್ರ ವಿದ್ಯುತ್ ಬಳಕೆದಾರರು ಎಂದಿನಂತೆ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ವಿದ್ಯುತ್ ಬಳಕೆದಾರರು ಸರ್ಕಾರದ ಗ್ಯಾರಂಟಿ ಯೋಜನೆ ಕಡೆ ಮುಖಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರತಿತಿಂಗಳಿಗೆ 14.65 ಕೋಟಿ ಯುನಿಟ್ ವಿದ್ಯುತ್​ ಬಳಕೆ ಮಾಡುತ್ತೀವೆ. ಕಳೆದ ಏಪ್ರಿಲ್​ನಲ್ಲಿ 12.95 ಕೋಟಿ ವಿದ್ಯುತ್ ಬಿಲ್ ಆಗಿದ್ದು ಅದರಲ್ಲಿ 12.30 ಕೋಟಿ ರೂಪಾಯಿ ಬಿಲ್ ಈಗಾಗಲೇ ಪಾವತಿಯಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಭಾಗ್ಯಜ್ಯೋತಿ ಯೋಜನೆಯಡಿ 1.28 ಲಕ್ಷ ಕುಟುಂಬಗಳಿಗೆ ಪ್ರತಿತಿಂಗಳು 40 ಯುನಿಟ್ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 35 ಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗುತ್ತಿದೆ. 2.75 ಲಕ್ಷ ಮನೆಗಳಿಗೆ ಪ್ರತಿ ತಿಂಗಳು 1.11 ಕೋಟಿ ಯುನಿಟ್ ವಿದ್ಯುತ್​ ಗೃಹ ಬಳಕೆಗೆ ಬಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ವರ್ಷಕ್ಕೆ ಒಂದು ಕುಟುಂಬ ಸರಾಸರಿ 321 ಯುನಿಟ್ ಬಳಕೆ ಮಾಡುತ್ತಿದೆ.

ಆದರೆ ಬಿಲ್ ಪಾವತಿಯಾಗುವದು ಮಾತ್ರ 304 ಯುನಿಟ್ ವಿದ್ಯುತ್​ಗೆ ಮಾತ್ರ ಇನ್ನುಳಿದ 17 ಯುನಿಟ್​ಗೆ ಬಿಲ್ ಪಾವತಿಯಾಗುತ್ತಿಲ್ಲಾ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆಯಾಗಿ ಕಳೆದ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಹಾವೇರಿ ಜಿಲ್ಲೆ ವಿದ್ಯುತ್ ಬಳಕೆದಾರರು ವಿಳಂಬ ಮಾಡಿಲ್ಲ. ಆದರೆ ಪ್ರಸ್ತುತ ಮೇ ತಿಂಗಳು ವಿದ್ಯುತ್ ಪಾವತಿ ಯಾವ ರೀತಿ ಇರಲಿದೆ ಎಂಬುವದನ್ನ ಕಾದು ನೋಡಬೇಕಿದೆ ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

ಕಾಂಗ್ರೆಸ್​​ನ ಐದು ಗ್ಯಾರಂಟಿಗಳ ಜಾರಿಗೆ ಸರ್ಕಾರದಿಂದ ತಾತ್ವಿಕವಾಗಿ ಅನುಮೋದನೆ: ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವೀಧರರಿಗೆ ಪ್ರತಿ ತಿಂಗಳು 3,000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅನ್ನಭಾಗ್ಯ ಯೋಜನೆ ಜಾರಿ ಸಂಬಂಧ ತಾತ್ವಿಕ ಒಪ್ಪಿಗೆ ನೀಡಿ ಸರ್ಕಾರ ಆದೇಶಿಸಿದೆ. ಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಸರಿಸಬೇಕಾದ ಕಾರ್ಯವಿಧಾನ ರೂಪುರೇಷೆ ಮತ್ತು ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳ ಬಗ್ಗೆ ಸರ್ಕಾರದಿಂದ ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಜುಲೈ ತಿಂಗಳಲ್ಲಿ 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಿದ್ದೇವೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.