ಹಾವೇರಿ: ಪಾಟೀಲ ಪುಟ್ಟಪ್ಪರವರ ಸ್ವಗ್ರಾಮದಲ್ಲಿರುವ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದ್ದು, ಸಂಬಂಧಿಕರು ಮನೆಗೆ ಆಗಮಿಸುತ್ತಿದ್ದಾರೆ.
ಸೋಮವಾರ ವಿಧಿವಶರಾದ ಪಾಟೀಲ ಪುಟ್ಟಪ್ಪರವರ ಸ್ವಗ್ರಾಮ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ. ಇಲ್ಲಿ ನಾಲ್ಕನೇ ತರಗತಿಯವರೆಗೆ ತಮ್ಮ ವಿದ್ಯಾಭ್ಯಾಸ ಮಾಡಿದ್ದಾರೆ. ಪಾಪು ಇನ್ನಿಲ್ಲ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಅವರ ಸಂಬಂಧಿಕರು ಪಾಪು ಮನೆಗೆ ಆಗಮಿಸುತ್ತಿದ್ದು, ಅವರು ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.