ETV Bharat / state

ಇಬ್ಬರು ಮಕ್ಕಳ ಮೃತದೇಹಗಳನ್ನು 6 ಗಂಟೆ ಉಪ್ಪಿನ ರಾಶಿಯೊಳಗಿಟ್ಟ ಪೋಷಕರು! - ಉಪ್ಪಿನ ರಾಶಿಯಲ್ಲಿ ಮೃತದೇಹಗಳು

ನೀರಿನಲ್ಲಿ ಮುಳಗಿ ಮೃತಪಟ್ಟಿದ್ದ ಇಬ್ಬರು ಮಕ್ಕಳ ಶವಗಳನ್ನು ಪೋಷಕರು ಉಪ್ಪು ಸುರಿದು ಹಲವು ಗಂಟೆಗಳ ಕಾಲ ಸಂರಕ್ಷಿಸಿಟ್ಟಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ನೀರಿನಲ್ಲಿ ಮುಳಗಿ ಮೃತಪಟ್ಟ ಬಾಲಕರು
ನೀರಿನಲ್ಲಿ ಮುಳಗಿ ಮೃತಪಟ್ಟ ಬಾಲಕರು
author img

By ETV Bharat Karnataka Team

Published : Dec 26, 2023, 5:15 PM IST

ಹಾವೇರಿ: ನೀರಿನಲ್ಲಿ‌ ಮುಳುಗಿ ಪ್ರಾಣ ಕಳೆದುಕೊಂಡ ಮಕ್ಕಳ ಮೃತದೇಹಗಳನ್ನು ಉಪ್ಪಿನ ರಾಶಿಯಲ್ಲಿ ನಾಲ್ಕೈದು ಗಂಟೆಗಳ ಕಾಲ ಇಟ್ಟರೆ ಮತ್ತೆ ಬದುಕಿ‌ ಬರುತ್ತಾರೆ ಎಂಬ ವಿಡಿಯೋವೊಂದು ಹಲವು ತಿಂಗಳ ಹಿಂದೆ ಸಾಮಾಜಿಕ‌ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನೇ ನಿಜವೆಂದು ತಿಳಿದು ಇತ್ತೀಚಿಗೆ ನೀರಿನಲ್ಲಿ ಮುಳುಗಿ‌ ಸಾವನ್ನಪ್ಪಿದ ಇಬ್ಬರು ಬಾಲಕರ ಮೃತದೇಹಗಳನ್ನು ಪೋಷಕರು ಉಪ್ಪಿನ ರಾಶಿಯಲ್ಲಿಟ್ಟ ಘಟನೆ ಹಾವೇರಿ ಜಿಲ್ಲೆ‌ಯ ಬ್ಯಾಡಗಿ ತಾಲೂಕಿನ ಗಾಳಪೂಜಿ ಗ್ರಾಮದಲ್ಲಿ ನಡೆದಿದೆ.

ಗಾಳಪೂಜಿ ಗ್ರಾಮದಲ್ಲಿ ಭಾನುವಾರ ಕೆರೆಗೆ ಈಜಲು ತೆರಳಿದ್ದ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಹೇಮಂತ್ (12) ಮತ್ತು ನಾಗರಾಜ್ (11) ಮೃತಪಟ್ಟವರು. ಇವರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯುತ್ತಿದ್ದಂತೆ ಪೋಷಕರು ಶವಗಳನ್ನು ಉಪ್ಪಿನ ರಾಶಿಯಲ್ಲಿ ಆರು ಗಂಟೆಗಳ ಕಾಲ ಇಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋ ನೋಡಿ ಮಕ್ಕಳನ್ನು ಬದುಕಿಸಲು ಪೋಷಕರು ಈ ರೀತಿಯ ಪ್ರಯತ್ನ ಮಾಡಿದ್ದಾರೆ. ಕೊನೆಗೂ ಮಕ್ಕಳು‌ ಮರುಜೀವ ಪಡೆಯದೇ ಇದ್ದಾಗ ಕಾಗಿನೆಲೆಯ ಪೊಲೀಸರು ಪೋಷಕರ‌ ಮನವೊಲಿಸಿದ್ದಾರೆ. ನಂತರ ಶವಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ: ಮೈಸೂರು: ಸೋದರ ಮಾವನ ಕೊಲೆ ಪ್ರಕರಣ, ಪೊಲೀಸ್ ಕಾನ್ಸ್‌ಟೆಬಲ್‌ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.