ETV Bharat / state

ಮೈದುಂಬಿದ ನದಿಯಲ್ಲಿ ಈಜಿದ ವೃದ್ಧ.. 'ಹೌದೋ ಹುಲಿಯಾ' ಎಂದು ಹುರಿದುಂಬಿಸಿದ ಜನ- Video - aged person swim in varad river

ತುಂಬಿ ಹರಿಯುತ್ತಿರುವ ವರದಾ ನದಿಯಲ್ಲಿ ಈಜಿದ ವೃದ್ಧ- ಹೌದೋ ಹುಲಿಯಾ ಎಂದು ಹುರಿದುಂಬಿಸಿದ ಜನ- ಈ ದುಸ್ಸಾಹಸ ಕಂಡು ಕೆಲವರ ಆತಂಕ

odl aged person swimming in river
ತುಂಬಿ ಹರಿಯುತ್ತಿರುವ ನದಿಯಲ್ಲಿ ಈಜುತ್ತಿರುವ ವೃದ್ದ
author img

By

Published : Jul 18, 2022, 1:00 PM IST

ಹಾವೇರಿ: ತಾಲೂಕಿನ ಹಾಲಗಿ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ವರದಾ ನದಿಯಲ್ಲಿ ವೃದ್ಧರೊಬ್ಬರು ನದಿಗೆ ಹಾರಿ ಅನಾಯಾಸವಾಗಿ ಈಜಿ ದಡ ಸೇರಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಅಜ್ಜನಿಗೆ ಹೌದೋ ಹುಲಿಯಾ ಎಂದು ಹುರಿದುಂಬಿಸಿದರೆ, ಇನ್ನೂ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಮೊಬೈಲ್​ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.

ಮತ್ತೊಂದೆಡೆ ಜಿಲ್ಲೆಯ ಕುಮುದ್ವತಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ರಟ್ಟಿಹಳ್ಳಿ ತಾಲೂಕಿನ ಯಲಿವಾಳ ಚಪ್ಪರದಹಳ್ಳಿ ಸೇತುವೆ ಸಂಪರ್ಕ ಕಡಿತಗೊಂಡಿದೆ. ಈ ಸೇತುವೆ ಮೇಲೆ ಹರಿಯುತ್ತಿರುವ ನೀರಿನಲ್ಲಿ ಸೇತುವೆ ದಾಟುವ ಮೂಲಕ ಹುಚ್ಚು ಸಾಹಸ ಮೆರೆಯುತ್ತಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

people crossing bridge
ಸೇತುವೆ ದಾಟುತ್ತಿರುವ ಜನ

ಸೇತುವೆ ಮೇಲೆ ಓಡಾಡದಂತೆ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿದ್ದರೂ ಸಹ ಜನರು ಸೈಕಲ್‌ ಹೊತ್ತುಕೊಂಡು ನದಿ ದಾಟುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ: ಭಾರಿ ಮಳೆಯಿಂದ ಕುಸಿದ ರಸ್ತೆ.. ಎಎಂಸಿಯ ದಿವ್ಯ ನಿರ್ಲಕ್ಷ್ಯ ಬಯಲು- Video Viral

ETV Bharat Logo

Copyright © 2025 Ushodaya Enterprises Pvt. Ltd., All Rights Reserved.