ಹಾವೇರಿ: ಯುದ್ಧಪೀಡಿತ ಉಕ್ರೇನ್ನಲ್ಲಿ ಶೆಲ್ ದಾಳಿಗೆ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತದೇಹವನ್ನು ಪೋಷಕರು ತಾವು ನುಡಿದಂತೆ ದಾವಣಗೆರೆಯ ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ಹಸ್ತಾಂತರ ಮಾಡಿದರು.
ಎಸ್ ಎಸ್ ಹೈಟೆಕ್ ಆಸ್ಪತ್ರೆಯ ಅಂಗಾಂಗ ರಚನಾ ಶಾಸ್ತ್ರ ವಿಭಾಗದ ಸಿಬ್ಬಂದಿಗೆ ನವೀನ್ ಮೃತ ದೇಹವನ್ನು ತಂದೆ ಶೇಖರಪ್ಪ ಗ್ಯಾನಗೌಡರ್, ತಾಯಿ ವಿಜಯಲಕ್ಷ್ಮಿ ಸೇರಿದಂತೆ ಸಹೋದರ ಹರ್ಷ ನೇತೃತ್ವದಲ್ಲಿ ಹಸ್ತಾಂತರ ಮಾಡಲಾಯಿತು.
ಇದನ್ನೂ ಓದಿ: ಸಾಲದ ಸುಳಿಗೆ ಸಿಲುಕಿದ್ದ ಮಿಸ್ಟರ್ ಇಂಡಿಯಾ ಪುರಸ್ಕೃತ: ದರೋಡೆ ಆರೋಪದಡಿ ಸೆಲೆಬ್ರಿಟಿ ಅರೆಸ್ಟ್
ಚಪ್ಪಾಳೆ ಹಾಗು ಶಿಳ್ಳೆ ಹೊಡೆಯುವ ಮೂಲಕ ಚಳಗೇರಿ ಗ್ರಾಮಸ್ಥರು ಮೃತ ನವೀನ್ ಅವರಿಗೆ ಅಂತಿಮ ವಿದಾಯ ಸಲ್ಲಿಸಿದರು. ಆ್ಯಂಬುಲೆನ್ಸ್ ಮೂಲಕ ನವೀನ್ ಪಾರ್ಥಿವ ಶರೀರರವನ್ನು ದಾವಣಗೆರೆಯ ಎಸ್ ಎಸ್ ಹೈಟೆಕ್ ಆಸ್ಪತ್ರೆಗೆ ರವಾನಿಸಲಾಯಿತು.
ಈ ವೇಳೆ ಮಾತನಾಡಿದ ತಂದೆ ಶೇಖರಪ್ಪ ಗ್ಯಾನಗೌಡರ್, ನಾನು ಹೇಳಿದಂತೆ ನನ್ನ ಮಗನ ಮೃತದೇಹವನ್ನು ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ಹಸ್ತಾಂತರ ಮಾಡಿದ್ದೇನೆ ಎಂದು ತನ್ನ ಮಗನಿಗೆ ಕಣ್ಣೀರಿನ ವಿದಾಯ ಹೇಳಿದರು.
21 ದಿನಗಳ ಕಾಲ ನಮ್ಮೊಂದಿಗೆ ಇದ್ದ, ಪಾರ್ಥಿವ ಶರೀರ ತರಲು ಸಹಕರಿಸಿದ ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿ, ಶಾಸಕರು ಮತ್ತು ಸಚಿವರಿಗೆ ನವೀನ್ ತಂದೆ ಶೇಖರಪ್ಪ ಇದೇ ವೇಳೆ ಧನ್ಯವಾದ ತಿಳಿಸಿದ್ದಾರೆ.