ಹಾವೇರಿ : ಜಿಲ್ಲೆಯಾದ್ಯಂತ ನಾಗರಪಂಚಮಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹೊಸ ಉಡುಪುಗಳನ್ನು ಧರಿಸಿ ಭಕ್ತರು ಬೆಳಗ್ಗೆಯಿಂದ ನಾಗಬನಗಳಿಗೆ ತೆರಳಿ ನಾಗದೇವನಿಗೆ ಹಾಲೆರೆಯುತ್ತಿದ್ದಾರೆ.
ನಾಗಪ್ಪನಿಗೆ ಕೊಡಬತ್ತಿ, ಕೊಕ್ಕಾಬತ್ತಿ, ಕಣ್ಬಟ್ಟುಗಳಿಂದ ಸಿಂಗರಿಸಿ ಹೆಂಗಳೆಯರು ಕರಿಕೆಯಿಂದ ಹಾಲೆರದರು. ಇದೇ ಸಂದರ್ಭದಲ್ಲಿ ನಾಗಬನಗಳಲ್ಲಿ ಮುತ್ತೈದೆಯರಿಗೆ ಉಡಿ ತುಂಬಿ ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಂಡರು. ಇನ್ನು ಕೆಲವರು ಮನೆಯಲ್ಲಿ ನಾಗಪ್ಪನನ್ನು ಪ್ರತಿಷ್ಠಾಪಿಸಿ ಹಾಲೆರೆಯುವ ಮೂಲಕ ನಾಗರಂಪಚಮಿ ಆಚರಿಸಿದರು. ಇಡೀ ಜಿಲ್ಲೆಯಾದ್ಯಂತ ನಾಗರಪಂಚಮಿಯ ಸಂಭ್ರಮ ಮನೆಮಾಡಿದೆ.