ಹಾವೇರಿ: ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ನೂರಾರು ರೈತರು ಧನ-ಕರುಗಳಿಗೆಂದು ಶೇಖರಿಸಿಟ್ಟಿದ್ದ ಹುಲ್ಲೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿದೆ. ಈ ಹಿನ್ನೆಲೆ ಜಾನುವಾರುಗಳಿಗೆ ಸಹ ಸಂಘ ಸಂಸ್ಥೆಗಳು ಸಹಾಯಹಸ್ತ ನೀಡುತ್ತಿವೆ.
ಮೈಸೂರಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ವಿ. ರಾಜೀವ್ ನಾಲ್ಕು ಲಾರಿ ಬತ್ತದ ಹುಲ್ಲನ್ನು ಹಾವೇರಿ ಜಿಲ್ಲೆಗೆ ಕಳುಹಿಸಿಕೊಟ್ಟಿದ್ದಾರೆ. ಲಾರಿಗಳನ್ನು ಸ್ವಾಗತಿಸಿಕೊಂಡ ಹಾವೇರಿ ಜಿಲ್ಲಾ ಬಿಜೆಪಿ ಕಾರ್ಯಕರ್ತ ಹೆಚ್.ವಿ.ರಾಜೀವ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮೇವನ್ನು ಜಿಲ್ಲೆಯಲ್ಲಿ ಅತೀ ಹೆಚ್ಚು ಜಾನುವಾರುಗಳಿರುವ ಪ್ರವಾಹ ಪೀಡಿತ ಗ್ರಾಮಗಳ ರೈತರಿಗೆ ಕಳಿಸುವುದಾಗಿ ತಿಳಿಸಿದ್ರು.