ಹಾವೇರಿ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಸಚಿವ ಮುರುಗೇಶ್ ನಿರಾಣಿ ಟೀಕಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಒಪ್ಪಿಕೊಂಡಿದೆ. ಬೇರೆಯವರಿಂದ ಬುದ್ದಿ ಹೇಳಿಸಿಕೊಳ್ಳುವ ಪರಿಸ್ಥಿತಿ ನಮಗೆ ಬಂದಿಲ್ಲ ಎಂದರು.
ಉಪ ಚುನಾವಣೆ: ಶಿವರಾಜ ಸಜ್ಜನ ಅವರು ದಿ.ಸಿಎಂ ಉದಾಸಿಯವರ ದತ್ತು ಪತ್ರರಿದ್ದಂತೆ. ಹಾನಗಲ್ ಕ್ಷೇತ್ರದ ಮತದಾರರ ಆಶ್ರೀರ್ವಾದ ಬಿಜೆಪಿ ಮೇಲಿದೆ. ಉಪಚುನಾವಣೆಯಲ್ಲಿ ಸಜ್ಜನರ ಗೆಲುವು ಖಚಿತ ಎಂದು ನಿರಾಣಿ ಭವಿಷ್ಯ ನುಡಿದರು.
ಬಂಡಾಯ ಶಮನ: ಸಿ.ಆರ್.ಬಳ್ಳಾರಿಯವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದರು. ಮನವೊಲಿಕೆ ನಂತರ ನಾಮಪತ್ರ ಹಿಂಪಡೆದಿದ್ದಾರೆ. ಯಾವುದೇ ಒತ್ತಾಯವಿಲ್ಲದೆ ಹಿರಿಯರ ಮಾತಿಗೆ ಬೆಲೆ ಕೊಟ್ಟಿದ್ದಾರೆ. ಅಲ್ಲದೆ, ಶಿವರಾಜ ಸಜ್ಜನರ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ ಎಂದರು.