ETV Bharat / state

ಮಳೆಗೆ ಕೆಸರು ಗದ್ದೆಯಾದ ರಾಣೆಬೆನ್ನೂರು ನಗರದ ರಸ್ತೆಗಳು - Ranebennur city roads Damage

ರಾಣೆಬೆನ್ನೂರು ನಗರದ ಬಹುತೇಕ ವಾರ್ಡ್​ಗಳ ರಸ್ತೆಗಳು ಗುಂಡಿ ಬಿದ್ದಿವೆ. ಇವನ್ನು ದುರಸ್ತಿಗೊಳಿಸಬೇಕಾದ ನಗರಸಭೆ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Ranebennur city roads Damage
ಕೆಸರು ಗದ್ದೆಯಾದ ರಾಣೆಬೆನ್ನೂರು ನಗರದ ರಸ್ತೆಗಳು..
author img

By

Published : Sep 16, 2020, 7:58 AM IST

ಹಾವೇರಿ: ರಾಣೆಬೆನ್ನೂರು ನಗರದ ಪ್ರಮುಖ ರಸ್ತೆಗಳು ಮಳೆಯಿಂದ ಕೆಸರು ಗದ್ದೆಯಾಗಿದ್ದು, ವಾಹನ ಸಂಚಾರಕ್ಕೆ ಮತ್ತು ಪಾದಾಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಕೆಸರು ಗದ್ದೆಯಾದ ರಾಣೆಬೆನ್ನೂರು ನಗರದ ರಸ್ತೆಗಳು..

ಹೌದು, ರಾಣೆಬೆನ್ನೂರು ನಗರದ ಬಹುತೇಕ ವಾರ್ಡ್​ಗಳ ರಸ್ತೆಗಳು ಗುಂಡಿ ಬಿದ್ದಿವೆ. ಇದನ್ನು ದುರಸ್ತಿಗೊಳಿಸಬೇಕಾದ ನಗರಸಭೆ ಅಧಿಕಾರಿಗಳು ಮಾತ್ರ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ನಗರಸಭೆ ರಸ್ತೆಯನ್ನು ದುರಸ್ತಿಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ಬಾರಿ ಒತ್ತಾಯಿಸಿದರೂ ಕೂಡ ಅಧಿಕಾರಿಗಳು ಮಾತ್ರ ಇವರ ಮನವಿಗೆ ಸೊಪ್ಪು ಹಾಕಿಲ್ಲ ಎನ್ನಲಾಗಿದೆ.

ಯುಜಿಡಿ ಮತ್ತು ಕುಡಿಯವ ನೀರಿನ ಕಾಮಗಾರಿ ಕೆಲಸದಿಂದ ಗುಂಡಿ: ನಗರದಲ್ಲಿ ಕಳೆದ ಎರಡು ವರ್ಷದಿಂದ ಯುಜಿಡಿ ಮತ್ತು 24*7 ಕುಡಿಯುವ ನೀರು ಕಾಮಗಾರಿ ಮಾಡಿ ತಿಂಗಳುಗಳೇ ಕಳೆದಿವೆ. ಆದರೆ ಇವುಗಳನ್ನು ನಿರ್ವಹಿಸಿದ ಕಂಪನಿಗಳಾಗಲಿ ಅಥವಾ ಗುತ್ತಿಗೆದಾರರು ಆಗಲಿ ರಸ್ತೆಗಳನ್ನು ಇದುವರೆಗೂ ದುರಸ್ತಿ ಮಾಡದೇ ನಗರಸಭೆ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ದಿನ ನಿತ್ಯ ನೂರಾರು ವಾಹನಗಳು ಕೆಸರಿನಲ್ಲಿಯೇ ಓಡಾಡುವುದರಿಂದ ಗುಂಡಿಗಳು ಹೆಚ್ಚಾಗಿವೆ ಎಂಬುವುದು ಆಟೋ ಚಾಲಕನೋರ್ವನ ಮಾತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.