ETV Bharat / state

ಸಂಸ್ಕಾರ-ಧರ್ಮವನ್ನು ಸಾರುವ ಸ್ವಾಮೀಜಿಯವರ ಕಾರ್ಯ‌ ಅಮೂಲ್ಯ: ಸಂಸದ ರಾಘವೇಂದ್ರ - Dindadahalli Shivananda Shivacharya

ರಾಜ್ಯದಲ್ಲಿ ಸದ್ಯ ಕೊರೊನಾ ಹಾಗೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ಎಲ್ಲ ನಿರ್ವಹಣೆ ಮಾಡುತ್ತಿದೆ. ಈ ನಡುವೆ ದಿಂಡದಹಳ್ಳಿ ಸ್ವಾಮೀಜಿ ಅದರ ನಿವಾರಣೆಗೆ ನವದುರ್ಗಿಯರ ಹೋಮ-ಹವನ ಮಾಡುತ್ತಿದ್ದಾರೆ.

MP BY Raghavendra talk about  Dindadahalli Shivananda Shivacharya
ಸಂಸ್ಕಾರ-ಧರ್ಮವನ್ನು ಸಾರುವ ಸ್ವಾಮೀಜಿಯವರ ಕಾರ್ಯ‌ ಅಮೂಲ್ಯ: ಸಂಸದ ರಾಘವೇಂದ್ರ
author img

By

Published : Oct 18, 2020, 2:31 PM IST

ರಾಣೆಬೆನ್ನೂರ: ಸಂಸ್ಕಾರ ಮತ್ತು ಧರ್ಮಗಳ ವಿಚಾರವನ್ನು ನಾಡಿಗೆ ಪ್ರಚಾರ ಪಡಿಸುವ ನಾಡಿನ ಸ್ವಾಮೀಜಿಯವರ ಕಾರ್ಯ ಅಮೂಲ್ಯವಾದದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಂಸ್ಕಾರ-ಧರ್ಮವನ್ನು ಸಾರುವ ಸ್ವಾಮೀಜಿಯವರ ಕಾರ್ಯ‌ ಅಮೂಲ್ಯ: ಸಂಸದ ರಾಘವೇಂದ್ರ

ರಾಣೆಬೆನ್ನೂರು ನಗರದಲ್ಲಿ ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ಧರ್ಮ ಕ್ಷೇತ್ರದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ನಾಗದೇವತೆ ಗುರು ನಿವಾಸ ಮತ್ತು ನವದುರ್ಗಿಯರ ದೇವಸ್ಥಾನಕ್ಕೆ ಶಂಕು ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಸದ್ಯ ಕೊರೊನಾ ಹಾಗೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ಎಲ್ಲ ನಿರ್ವಹಣೆ ಮಾಡುತ್ತಿದೆ. ಈ ನಡುವೆ ದಿಂಡದಹಳ್ಳಿ ಸ್ವಾಮೀಜಿ ಅದರ ನಿವಾರಣೆಗೆ ನವದುರ್ಗಿಯರ ಹೋಮ-ಹವನ ಮಾಡುತ್ತಿದ್ದಾರೆ. ಇಂತಹ ಮಹಾನ ಕಾರ್ಯಕ್ಕೆ ನಾವು ಆಭಾರಿ ಎಂದರು. ಸದ್ಯ ರಾಣೆಬೆನ್ನೂರು ಕ್ಷೇತ್ರದ ದಿಂಡದಹಳ್ಳಿ ಕ್ಷೇತ್ರದ ಮಹಿಮೆಯನ್ನು ಇಲ್ಲಿ ಪಸರಿಸಲು ಸ್ವಾಮೀಜಿ ಮುಂದಾಗಿದ್ದಾರೆ ಎಂದರು.

ಕಾರ್ಯಕ್ರಮ ಸಾನ್ನಿಧ್ಯವನ್ನು ದಿಂಡದಹಳ್ಳಿ ಕ್ಷೇತ್ರದ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.