ಹಾನಗಲ್: ಇಲ್ಲಿನ ತಾಲೂಕು ಪಂಚಾಯಿತಿ ಕಟ್ಟಡ ಜೇನುಗೂಡುಗಳ ಆಶ್ರಯ ತಾಣವಾಗಿದ್ದು, ಇಲ್ಲಿ ಹತ್ತಕ್ಕೂ ಅಧಿಕ ಗೂಡುಗಳಿವೆ.
ಅನೇಕ ದಿನಗಳಿಂದ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಜೇನು ಹುಳುಗಳು ಗೂಡು ಕಟ್ಟಿದ್ದರೂ ಇಲ್ಲಿಯವರೆಗೂ ಯಾರಿಗೂ ತೊಂದರೆ ಮಾಡಿಲ್ಲವಂತೆ.
ಅಲ್ಲದೆ ಇಲ್ಲಿನ ಜನರು ಎರಡು ಬಾರಿ ಜೇನುತುಪ್ಪವನ್ನು ಸವಿದಿದ್ದಾರೆ. ತಾಲೂಕು ಪಂಚಾಯಿತಿಗೆ ಬರುವ ಜನರು ಈ ಗೂಡುಗಳನ್ನು ನೋಡಿ ಆಶ್ಚರ್ಯ ಪಡುತ್ತಾರೆ. ಜನ ದಟ್ಟಣೆಯಿಂದ ಕೂಡಿದ್ದರೂ ಇದುವರೆಗೂ ಜೇನುಹುಳುಗಳು ಯಾರಿಗೂ ತೊಂದರೆ ನೀಡದಿರುವುದು ಸಮಾಧಾನಕರ ಸಂಗತಿ.