ETV Bharat / state

ಸರ್ಕಾರಿ ನೌಕರಿಯ ಆಮಿಷ... ಲಕ್ಷಾಂತರ ರೂಪಾಯಿ ದೋಖಾ

ಪಂಗನಾಮದ ಕತೆಗಳು ಇತ್ತೀಚೆಗೆ ಅತಿಯಾಗುತ್ತಿವೆ. ಹಣದ ಆಮಿಷಕ್ಕೆ ಒಳಗಾಗಿ ಇಂತಹ ಕೃತ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳುವ ಅನೇಕರಿದ್ದಾರೆ. ಅಂತೆಯೇ ಇಲ್ಲೊಬ್ಬ ಆಸಾಮಿ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಪಂಗನಾಮ ಹಾಕಿದ್ದಾನೆ.

ಹಾವೇರಿ
author img

By

Published : Jun 25, 2019, 8:58 PM IST

ಹಾವೇರಿ: ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಘಟನೆ ಇಲ್ಲಿಯ ಕಲ್ಲುಮಂಟಪದಲ್ಲಿ ನಡೆದಿದೆ.

ಇಲ್ಲಿನ ಇರ್ಷಾದ್ ಎಂಬ ಅಕಾಂಕ್ಷಿಗೆ ರಾಜೇಸಾಬ್ ಎಂಬ ವ್ಯಕ್ತಿ ಈ ರೀತಿ ಪಂಗನಾಮ ಹಾಕಿದ್ದಾನೆ. ಆರಂಭದಲ್ಲಿ ಮನೆಗೆ ಬಂದಿದ್ದ ರಾಜೀಸಾಬ್, ನಿಮಗೆ ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ಹೇಳಿ ಹಲವು ಕಾರಣಗಳನ್ನ ನೀಡಿ ಹಣ ಪಡೆದಿದ್ದಾನೆ.

ಹಣ ಕೊಡಿಸುವುದಾಗಿ ದೋಖಾ

ಆ ಬಳಿಕ ಇಂದು ಸಿಕ್ಕ ರಾಜೇಸಾಬನನ್ನು ಇರ್ಷಾದ್ ಮನೆಯವರು ಕೂಡಿಹಾಕಿ ತೀವ್ರ ತರಾಟೆಗೆ ತಗೆದುಕೊಂಡರು. ರಾಜೇಸಾಬ್ ತಮ್ಮಿಂದ ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಇರ್ಷಾದ್ ಆರೋಪಿಸಿದರು. ಆದರೆ ಆರೋಪಗಳನ್ನ ತಳ್ಳಿ ಹಾಕಿರುವ ರಾಜೇಸಾಬ್ ಇರ್ಷಾದ್​ರಿಂದ 35 ಸಾವಿರ ರೂಪಾಯಿ ಪಡೆದಿದ್ದು ನಿಜ. ಲಕ್ಷ ರೂಪಾಯಿ ಪಡೆದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.