ಹಾವೇರಿ: ಪಕ್ಷದಲ್ಲಿನ ಪ್ರಸ್ತುತ ಬೆಳವಣಿಗೆಗಳಿಂದ ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ, ನಾನೂ ಹಿರಿಯನಿದ್ದೇನೆ, ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಅವಕಾಶ ಮಾಡಿ ಕೊಡಬೇಕು. ಯಡಿಯೂರಪ್ಪನವರು ಅವಕಾಶ ಕೊಡ್ತೀನಿ ಎಂದಿದ್ದಾರೆ. ಅಧಿಕಾರ ಬೇಕು ಎಂದು ಕೇಳುವಾಗ ಭಿನ್ನಾಭಿಪ್ರಾಯ ಬರುವುದು ಸಹಜ. ಅಧಿಕಾರಕ್ಕಾಗಿ ಹಲವಾರು ರೀತಿಯ ತಂತ್ರ ಮಾಡ್ತಾರೆ ಎಂದರು.
ಕತ್ತಿಯವರಿಗೂ ಅವಕಾಶ ಸಿಗುತ್ತದೆ, ಅವರೂ ಮಂತ್ರಿಯಾಗುತ್ತಾರೆ. ಯಡಿಯೂರಪ್ಪನವರನ್ನು ಕೆಳಗಿಳಿಸಬೇಕು ಎಂಬ ಭಾವನೆ ಯಾರಿಗೂ ಇಲ್ಲ, ಅಧಿಕಾರ ಬೇಕು ಎಂದು ಕೇಳುವ ಕಸರತ್ತು ನಡೆದಿದೆ.
ಸಚಿವ ಸ್ಥಾನ ಸಿಗದಿದ್ದರೆ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತೇವೆ ಎಂದು ಕೆಲವರು ಹೇಳುತ್ತಾರೆ. ಆಂತರಿಕವಾಗಿ ಮಾತನಾಡ್ತಾರೆ, ಬಹಿರಂಗವಾಗಿ ಯಾರೂ ಹೇಳಿಲ್ಲ. ಅವರ ಉದ್ದೇಶ ಅಧಿಕಾರ ಸಿಗಲಿ ಎನ್ನುವುದಷ್ಟೇ ಹೊರತು ಬೇರೇನೂ ಅಲ್ಲ ಎಂದರು.