ETV Bharat / state

ನನಗೆ ಮಂತ್ರಿ ಸ್ಥಾನ ಬೇಡ, ಪಂಚಮಸಾಲಿ ಮೀಸಲಾತಿ ಕೊಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ - ಚಮಸಾಲಿ ಸಮಾಜದ 2ಎ ಮೀಸಲಾತಿ ಸತ್ಯಾಗ್ರಹ

ನಾವು ನಿಮಗೇನು ಮಂತ್ರಿ ಸ್ಥಾನ ಕೇಳಿಲ್ಲ. ನಮಗೆ ಮೀಸಲಾತಿ ಕೊಡ್ರಿ. ಇವತ್ತು ಅಧಿವೇಶನದಲ್ಲಿ ಸಿದ್ದರಾಮಯ್ಯ, ಸಿದ್ದರಾಮಯ್ಯರ ಪುತ್ರರಾದಿಯಾಗಿ ಎಲ್ಲರೂ ನನಗೆ ಬೆಂಬಲ ಕೊಟ್ಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

mla-basanagouda-patil-yatnal-urge-reservation-to-panchmasali-community
ನನಗೆ ಮಂತ್ರಿ ಸ್ಥಾನ ಬೇಡ, ಪಂಚಮಸಾಲಿ ಮೀಸಲಾತಿ ಕೊಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ
author img

By

Published : Sep 20, 2022, 11:05 PM IST

ಹಾವೇರಿ: ಪಂಚಮಸಾಲಿ ಮೀಸಲಾತಿ ಬಗ್ಗೆ ಇವತ್ತು ಅಧಿವೇಶನದಲ್ಲಿ ಉತ್ತಮ ಚರ್ಚೆ ಆಗಿದೆ. ನವೆಂಬರ್​​ ತಿಂಗಳೊಳಗೆ ಮೀಸಲಾತಿ ಸಿಗುವ ವಿಶ್ವಾಸವಿದೆ. ಇಲ್ಲವಾದಲ್ಲಿ ನವೆಬರ್ ಎರಡನೇ ವಾರ ಬೆಂಗಳೂರಿನಲ್ಲಿ ಕೊನೆಯ ಬ್ರಹ್ಮಾಸ್ತ್ರ ಉಪಯೋಗ ಮಾಡೋಣ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಹಾವೇರಿ ಜಿಲ್ಲೆ‌ ಶಿಗ್ಗಾಂವಿ ಪಟ್ಟಣದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದ ಮುಂದೆ ಮಂಗಳವಾರ ನಡೆದ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಸರ್ವಪಕ್ಷದ ಅಧಿವೇಶನ ಕರೆಯುತ್ತೇನೆ ಅಂದಿದ್ದರು‌. ನಿನ್ನೆ ರಾತ್ರಿಯೂ ಒಂದು ಗಂಟೆ ಮಾತನಾಡಿದ್ದಾರೆ. ಕೊಡುತ್ತಿದ್ದರೆ ಕೊಡಿ, ಇಲ್ಲ ಅಂದರೆ ಅಂತ ತಿಳಿಸಿದ್ದಾನೆ ಎಂದರು.

ನನಗೆ ಮಂತ್ರಿ ಸ್ಥಾನ ಬೇಡ, ಮೀಸಲಾತಿ ಕೊಡಿ: ನಾವು ನಿಮಗೇನು ಮಂತ್ರಿ ಸ್ಥಾನ ಕೇಳಿಲ್ಲ. ನಮಗೆ ಮೀಸಲಾತಿ ಕೊಡ್ರಿ. ಇವತ್ತು ಅಧಿವೇಶನದಲ್ಲಿ ಸಿದ್ದರಾಮಯ್ಯ, ಸಿದ್ದರಾಮಯ್ಯರ ಪುತ್ರರಾದಿಯಾಗಿ ಎಲ್ಲರೂ ನನಗೆ ಬೆಂಬಲ ಕೊಟ್ಟಿದ್ದಾರೆ. ಅಧಿವೇಶನ ಮುಗಿಯೋದರ ಒಳಗೆ ಎಲ್ಲ ಪಕ್ಷದ ಮುಖಂಡರು ಮೀಸಲಾತಿ ಚರ್ಚೆಯಲ್ಲಿ ಭಾಗವಹಿಸಿ ನಮ್ಮ ಹೋರಾಟಕ್ಕೆ ಜಯ ಸಿಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ ಎಂದು ತಿಳಿಸಿದರು.

ಸುಳ್ಳು ಹೇಳಿ ಜಗ್ಗುವುದು ಮುಗಿದು ಹೋಗಿದೆ. ನಾವು ರೊಕ್ಕ ಕೊಟ್ಟಿಲ್ಲ, ಡಾಬಾದಾಗ ಊಟ ಮಾಡಿಸಿಲ್ಲ, ದೂರು ಕೊಟ್ಟಿಲ್ಲ. ಎಲ್ಲರೂ ಸ್ವಯಂ ಪ್ರೇರಣೆಯಿಂದ 40-50 ಸಾವಿರ ಜನರು ಬಂದಿದ್ದೀರಿ. ಬೊಮ್ಮಾಯಿಯವರಿಗೆ ನಾವೊಂದು ಅಸ್ತ್ರ ಬಿಡಬೇಕಿತ್ತು, ಬಿಟ್ಟಿದ್ದೇವೆ. ಎರಡ್ಮೂರು ದಿನಗಳಿಂದ ನಮ್ಮ ಗುರುಗಳಿಗೆ ಧಮ್ಕಿ ಬರ್ತಾ ಇದ್ದವು. ಶಿಗ್ಗಾಂವಿಯಲ್ಲಿ ಸಭೆ ಮಾಡಿಸಿಕೊಡೋದಿಲ್ಲ ಎಂದಿದ್ದರು ಎಂದು ವಾಗ್ದಾಳಿ ನಡೆಸಿದರು.

ಅವರ ಹಿಂದೆ ಒಬ್ಬ ಕಳ್ಳ‌ ಇದ್ದಾನೆ: ನಮಗೂ ಸಿಎಂ ಬೊಮ್ಮಾಯಿ ಅವರಿಗೆ ಯಾವುದೇ ದ್ವೇಷವಿಲ್ಲ. ಆದರೆ, ಅವರ ಹಿಂದೆ ಒಬ್ಬ ಕಳ್ಳ‌ ಇದ್ದಾನೆ. ಅವ ಕೋಟಿಗಟ್ಟಲೆ ರೊಕ್ಕ ಮಾಡ್ಯಾರ, ಲೂಟಿ ಹೊಡೆದಾರ. ಬೊಮ್ಮಾಯಿಯವರದ್ದು ಏನೂ ತಪ್ಪಿಲ್ಲ. ನೀವು ಅಂಜಬೇಡಿ ಅಂತಾ ಬೊಮ್ಮಾಯಿಯವರಿಗೆ ಹೇಳಿದ್ದೇನೆ. ನಾವಿರುತನಕ ನಿಮ್ಮ ಖುರ್ಚಿಗೆ ಏನೂ ಆಗೋದಿಲ್ಲ ಎಂದು ಹೇಳಿದ್ದೇನೆ ಎಂದು ಯತ್ನಾಳ್​ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿಯವರ ನಿವಾಸದ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಸಮಾಜದ ಮುಖಂಡರು ರಾತ್ರಿ ಮುಕ್ತಾಯಗೊಳಿಸಿದರು.

ಇದನ್ನೂ ಓದಿ: ಮೀಸಲಾತಿಗೆ ಯಡಿಯೂರಪ್ಪ ಅಡ್ಡಿ.. ಸಿಎಂ ಬೊಮ್ಮಾಯಿ ಮನೆ ಮುಂದೆ ಸತ್ಯಾಗ್ರಹಕ್ಕೆ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.