ರಾಣೆಬೆನ್ನೂರು: ಸರ್ಕಾರದ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಶಾಸಕ ಅರುಣಕುಮಾರ ಪೂಜಾರ ಸಾವಿರಾರು ಜನ ಸೇರಿಸಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ನಗರದ ಸಿದ್ದೇಶ್ವರ ಸಭಾಭವನದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಹಾಗೂ ನೂರಾರು ಕಾರ್ಯಕರ್ತರಿಗೆ ಸನ್ಮಾನ ನೆಪದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಸರ್ಕಾರ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಪ್ರಾರಂಭವಾಗುತ್ತದೆ ಎಂಬ ಭಯದಿಂದ ಮುನ್ನೆಚ್ಚರಿಕೆಯಾಗಿ ರಾಜ್ಯಾದ್ಯಂತ ಕೊರೊನಾ ನಿಯಮಗಳನ್ನು ಜಾರಿ ಮಾಡಿದೆ. ಕೋವಿಡ್ ನಿಯಮದಂತೆ ಹೆಚ್ಚು ಜನ ಸೇರಿಸಿ ಸಭೆ, ಸಮಾರಂಭಗಳನ್ನು ಮಾಡಬಾರದು ಎಂಬ ಆದೇಶವಿದೆ. ಆದರೆ, ಶಾಸಕರು ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾವಿರಾರು ಜನರನ್ನು ಸೇರಿಸಿದ್ದಾರೆ.
ಅಲ್ಲದೇ ಜನರಿಗೆ ಅರಿವು ಮೂಡಿಸುವ ಆಶಾ ಕಾರ್ಯಕರ್ತೆಯರು ಸಹ ಸಮಾರಂಭದಲ್ಲಿ ಮಾಸ್ಕ್ ಹಾಕಿಕೊಳ್ಳದೇ ಇರುವುದು ನೋಡಿದರೆ ಇಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದಂತಾಗಿದೆ. ಜತೆಗೆ ತಾಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಕರ್ತವ್ಯ ಬಿಟ್ಟು ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : ರಥವನೇರಿದ ಶ್ರೀ ಗುರು ರಾಘವೇಂದ್ರ ರಾಯರು.. ಮಂತ್ರಾಲಯದಲ್ಲಿ ಉತ್ತರಾರಾಧನೆ ವೈಭವ..