ಹಾವೇರಿ: ಅತಿವೃಷ್ಠಿಯಲ್ಲಿ ಮನೆ ಕಳೆದುಕೊಂಡವರನ್ನು ಬಿಟ್ಟು ಮನೆ ಹಾಳಾಗದವರಿಗೆ ಪರಿಹಾರ ಬಿಡುಗಡೆ ಮಾಡಿದ್ದರೆ, ಅದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಮಾತನಾಡಿದ ಅವರು ಅತಿವೃಷ್ಠಿಯಲ್ಲಿ ಮನೆ ಕಳೆದುಕೊಂಡವರನ್ನು ಬಿಟ್ಟು ಮನೆ ಹಾಳಾಗದವರಿಗೆ ಪರಿಹಾರ ಬಿಡುಗಡೆ ಮಾಡಿದವರ ಮೇಲೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು. ಜಿಲ್ಲೆಯಲ್ಲಿ ಅತಿವೃಷ್ಠಿ ಮನೆ ಪರಿಹಾರ ನೀಡಲು ಲಂಚ ಪಡೆಯಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ರೀತಿಯ ಆರೋಪವನ್ನ ಇದೇ ಪ್ರಥಮ ಬಾರೆಗೆ ಕೇಳುತ್ತಿದ್ದೇನೆ ಎಂದು ಉತ್ತರಿಸಿದರು.
ನಾನು ಸಹ ಚಾಮರಾಜನಗರ,ಹಾಸನ,ರಾಯಚೂರು, ಮೈಸೂರು, ತುಮಕೂರು ಬೆಂಗಳೂರು ಜಿಲ್ಲೆಯ ಉಸ್ತುವಾರಿಯಾಗಿ ಕೆಲಸ ಮಾಡಿದ್ದೇನೆ. ಅಧಿಕಾರಿಗಳು ಈ ರೀತಿ ಅತಿವೃಷ್ಠಿಯಲ್ಲಿ ಹಣ ಕೇಳುತ್ತಿದ್ದಾರೆ ಎಂಬುವುದನ್ನು ನಾನು ಕೇಳಿಲ್ಲಾ ಈ ರೀತಿ ಅವ್ಯವಹಾರವಾಗಿದ್ದರೆ ಎರಡು ದಿನಗಳಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಸೋಮಣ್ಣ ತಿಳಿಸಿದರು.
ಪಿಡಿಒ ಲಂಚ ಕುರಿತಂತೆ ಮಾತನಾಡಿದ ಅವರು ಲೋಕಾಯುಕ್ತ ಬಲೆಗೆ ಬಿದ್ದಿ ಪಿಡಿಒ ತಪ್ಪುಮಾಡಿದ್ದರೆ ಅದರ ಫಲವನ್ನು ಅವರು ಅನುಭವಿಸುತ್ತಾರೆ ಅಂತವರನ್ನ ಜೈಲಿಗೆ ಹಾಕಿದರೆ ತಪ್ಪೇನಿಲ್ಲ ಎಂದರು. ಜಿಲ್ಲೆಯಲ್ಲಿ ಮನೆಕಳೆದುಕೊಂಡವರನ್ನು ಬಿಟ್ಟು ಮನೆ ಇದ್ದವರಿಗೆ ಹಣ ಬಿಡುಗಡೆಯಾಗಿದ್ದರೆ ಅದನ್ನ ಸರಿಪಡಿಸುತ್ತೇವೆ.
ಈ ಕುರಿತಂತೆ ವಿಭಾಗೀಯ ಅಧಿಕಾರಿಗಳ ಮೂಲಕ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದು, ಅದರಂತೆ ನಡೆದುಕೊಳ್ಳಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮತ್ತು ವಸತಿ ಖಾತೆಯಲ್ಲಿ ನಿರ್ಮಾಣವಾಗಿರುವ ರಸ್ತೆ ಮತ್ತು ಮನೆಗಳ ಒಳಗಿನ ಭಾಗ ಪರಿಶೀಲನೆ ನಡೆಸಿದ ವಿ.ಸೋಮಣ್ಣ ಗುತ್ತಿಗೆದಾರರ ವಿರುದ್ಧ ಗರಂ ಆದರು. ಡಿಸೆಂಬರ್ ನಾಲ್ಕರಂದು ಸಿಎಂ ಬಸವರಾಜ್ ಬೊಮ್ಮಾಯಿ ಮನೆಗಳನ್ನ ಲೋಕಾರ್ಪಣೆಗೊಳಿಸಿಲಿದ್ದಾರೆ. ಅಷ್ಟರಲ್ಲಿ ಎಲ್ಲ ಕೆಲಸ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಇದನ್ನೂ ಓದಿ:ಬಿಎಸ್ವೈ ತವರು ಜಿಲ್ಲೆಯಲ್ಲಿ ರಾಜ್ಯ ಪ್ರಶಿಕ್ಷಣ ವರ್ಗ: ಶಿವಮೊಗ್ಗಕ್ಕೆ ತೆರಳಿದ ಬಿಜೆಪಿ ನಾಯಕರು