ETV Bharat / state

"ಶಾಸಕರಿಗೆ ಡಿಕೆಶಿ ಎಚ್ಚರಿಕೆ ಕುರಿತು ಮಾತನಾಡುವುದಿಲ್ಲ, ಅಧ್ಯಕ್ಷರ ಕಟ್ಟಪಣೆಯನ್ನು ಪಾಲಿಸುತ್ತೇನೆ"- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - DK Shivakumar warning

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿ ಕೆ ಶಿವಕುಮಾರ್ ಶಾಸಕರಿಗೆ ನೀಡಿರುವ ಎಚ್ಚರಿಕೆ ಕುರಿತು ಮಾತನಾಡುವುದಿಲ್ಲ ಎಂದಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
author img

By ETV Bharat Karnataka Team

Published : Oct 29, 2023, 8:41 PM IST

Updated : Oct 29, 2023, 9:12 PM IST

ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿಕೆ

ಹಾವೇರಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ವಿಚಾರದಲ್ಲಿ, ಆಂತರಿಕ ವಿಚಾರದಲ್ಲಿ ಹೇಳಿಕೆ ನೀಡದಂತೆ ಶಾಸಕರಿಗೆ ಖಡಕ್​​ ಎಚ್ಚರಿಕೆ ನೀಡಿರುವ ಕುರಿತು ಮಾತನಾಡುವುದಿಲ್ಲಾ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದ್ದಾರೆ.

ಜಿಲ್ಲೆಯ ಹಾನಗಲ್ ತಾಲೂಕು ಸಾಂವಸಗಿ ಗ್ರಾಮದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಅಧ್ಯಕ್ಷರು ಅಪ್ಪಣೆ ಏನಿದೆ ಅದನ್ನು ಚಾಚು ತಪ್ಪದೆ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಅವರು ನಮ್ಮ ಪಕ್ಷದ ಅಧ್ಯಕ್ಷರು. ಯಾರೇ ಆಗಲಿ ಮಾಧ್ಯಮಗಳಿಗೆ ಹೇಳಿಕೆ ಕೊಡುವುದರ ಬಗ್ಗೆ ಗೊತ್ತಿದೆ. ಈ ವಿಚಾರವಾಗಿ ಜಾಸ್ತಿ ಮಾತನಾಡದೆ ಅಧ್ಯಕ್ಷರ ಅಪ್ಪಣೆಯಂತೆ ನಡೆದುಕೊಳ್ಳುತ್ತೇವೆ. ಸಿಎಂ ಖುರ್ಚಿ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಆ ವಿಚಾರ ಹೈಕಮಾಂಡ್​ಗೆ ಬಿಟ್ಟಿದ್ದು. ಯಾರು ಮುಖ್ಯಮಂತ್ರಿಯಾದರು ಕೂಡಾ ನಾವು ಕೆಲಸ ಮಾಡುತ್ತೇವೆ. ಯಾರೇ ಸಿಎಂ ಆಗಲಿ, ನಮಗೆ ಅಭ್ಯಂತರ ಇಲ್ಲಾ. ಸಿಎಂ ಸಿದ್ದರಾಮಯ್ಯ ಸಾಹೇಬರು ಒಳ್ಳೆಯ ಕೆಲಸ‌ ಮಾಡಿಕೊಂಡು ಹೋಗುತ್ತಿದ್ದಾರೆ. ಹೈಕಮಾಂಡ್ ತೀರ್ಮಾನ ಏನಿದೆಯೋ ಅದಕ್ಕೆ 136 ಜನರು ಬದ್ಧರಾಗಿದ್ದೇವೆ. ನಮ್ಮ ಅಧ್ಯಕ್ಷರು ಕಟ್ಟಪ್ಪಣೆ ಮಾಡಿದ್ದಾರೆ. ಹೈಕಮಾಂಡ್​ ಏನೇ ತೀರ್ಮಾನ ಮಾಡಿದರು ನಾನು ಶಿಸ್ತಿನ ಸಿಪಾಯಿ ರೀತಿ ಇರುತ್ತೇನೆ. ಮುಂದೆ ಹುಲಿ ಉಗುರಿನ ವಿಚಾರದಲ್ಲಿ ರಾಜಕೀಯ ಮಾಡೋದು ಏನಿಲ್ಲಾ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.

ಪಕ್ಷದ ಶಾಸಕರು, ಮುಖಂಡರಿಗೆ ಎಚ್ಚರಿಕೆ ನೀಡಿದ್ದ ಡಿ ಕೆ ಶಿವಕುಮಾರ್..​ ಬಿಜೆಪಿ ಕಾಂಗ್ರೆಸ್​ ಶಾಸಕರನ್ನು ಖರೀದಿ ಮಾಡುತ್ತಿದೆ ಎಂಬ ಆರೋಪಕ್ಕೆ ಶನಿವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್,​ ದೊಡ್ಡ ಷಡ್ಯಂತರ ನಡೆಯುತ್ತಿದೆ. ಆದರೆ ಇದ್ಯಾವುದಕ್ಕೂ ಫಲ ಸಿಗುವುದಿಲ್ಲ. ನಮಗೆ ಪ್ರತಿಯೊಬ್ಬರ ನಡವಳಿಕೆ ತಿಳಿದಿದೆ. ಈಗಾಗಲೇ ಒಬ್ಬರ ಹೆಸರು ಹೇಳಿದ್ದಾರೆ. ಬಹಳ ದೊಡ್ಡ ದೊಡ್ಡವರೇ ಇದರಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಏನೂ ಆಗುವುದಿಲ್ಲ. ನಾನು ನಮ್ಮ ಶಾಸಕರು ಯಾರೇ ಆಗಲಿ, ಯಾವ ಹೇಳಿಕೇನು ಕೊಡಬಾರದು. ಪಕ್ಷದ ಆಂತರಿಕ ಮತ್ತು ಅಧಿಕಾರದ ವಿಚಾರದಲ್ಲಿ ಯಾರೂ ಕೂಡ ಹೇಳಿಕೆ ನೀಡಬಾರದು. ಕೊನೆಯದಾಗಿ ವಿನಂತಿ ಜತೆಗೆ ವಾರ್ನಿಂಗ್ ಮಾಡುತ್ತಿದ್ದೇನೆ. ಏನಾದರು ಮತ್ತೆ ಇಂಥಹ ಮಾತುಗಳನ್ನು ಆಡಿದರೆ ನಾನು ವಿಧಿಯಿಲ್ಲದೇ ನೋಟಿಸನ್ನೇ ಕೊಡಬೇಕಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ : ಶಾಸಕರನ್ನು ಖರೀದಿ ಮಾಡುವುದೇ ಬಿಜೆಪಿಯವರ ಡಿಎನ್ಎ ಆಗಿದೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ

Last Updated : Oct 29, 2023, 9:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.