ETV Bharat / state

ಸಿದ್ದರಾಮಯ್ಯ, ಡಿಕೆಶಿ ರಾಷ್ಟ್ರದ್ರೋಹಿಗಳು: ಸಚಿವ ಕೆ.ಎಸ್.ಈಶ್ವರಪ್ಪ - ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯ

ಸಿದ್ದರಾಮಯ್ಯ ನನ್ನ ಒಳ್ಳೆಯ ಸ್ನೇಹಿತ, ಆದರೆ ಬುದ್ಧಿಗೆಟ್ಟ ಸ್ನೇಹಿತ. ಎಲ್ಲರೂ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯವಹರಿಸಲು ಹಿಂದಿ ಬಳಕೆ ಅನಿವಾರ್ಯ. ಏಕೆಂದರೆ ಎಲ್ಲರಿಗೂ ಇಂಗ್ಲಿಷ್​​ ಬರಲ್ಲ. ಆದರೆ ಇವರು ಅದಕ್ಕೂ ವಿರೋಧ ಮಾಡ್ತಾರೆ. ಸಿದ್ದರಾಮಯ್ಯನವರಿಗೆ ಬುದ್ಧಿ ಇಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

Minister KS Eshwarappa
ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Apr 9, 2022, 7:24 AM IST

ಹಾವೇರಿ: ಉಗ್ರಗಾಮಿಗಳು ಎನ್ನುವ ಕ್ಯಾಸೆಟ್​​ನ್ನು ಆರ್​​ಎಸ್​​ಎಸ್ ತಯಾರಿಸಿದೆ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಅಂತವರು ರಾಷ್ಟ್ರದ್ರೋಹಿಗಳು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂನ ತುಂಗಾರತಿಯಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ

ಇವರು ಮನುಷ್ಯರೇ ಅಲ್ಲ. ಸಿದ್ದರಾಮಯ್ಯ ನನ್ನ ಒಳ್ಳೆಯ ಸ್ನೇಹಿತ, ಆದರೆ ಬುದ್ಧಿಗೆಟ್ಟ ಸ್ನೇಹಿತ. ಎಲ್ಲರೂ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯವಹರಿಸಲು ಹಿಂದಿ ಬಳಕೆ ಅನಿವಾರ್ಯ. ಏಕೆಂದರೆ ಎಲ್ಲರಿಗೂ ಇಂಗ್ಲಿಷ್​​ ಬರಲ್ಲ. ಆದರೆ ಇವರು ಅದಕ್ಕೂ ವಿರೋಧ ಮಾಡ್ತಾರೆ. ಸಿದ್ದರಾಮಯ್ಯನವರಿಗೆ ಬುದ್ಧಿ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿಕೆಯನ್ನು ಜನರು ಬೆಂಬಲಿಸ್ತಾರೆ. ಆದರೆ ಸಿದ್ದರಾಮಯ್ಯ ಹೇಳಿಕೆಯನ್ನ ವಿರೋಧಿಸುತ್ತಾರೆ ಎಂದರು‌‌.

ಹಿಂದೂ ಮತ್ತು ಮುಸ್ಲಿಂರು ಯಾವಾಗಲೂ ಒಂದೇ ರೀತಿ ಇದ್ದಾರೆ. ಕಾಂಗ್ರೆಸ್​​ನವರು ಹಿಜಾಬ್ ಅದು, ಇದು ಅಂತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮುಸ್ಲಿಂ ಮುಖಂಡರು ಎಲ್ಲಿಯವರೆಗೆ ತಮ್ಮ ಜನಕ್ಕೆ ತಿಳಿಸಿ ಹೇಳುವುದಿಲ್ಲವೋ ಅಲ್ಲಿಯವರೆಗೂ ಈ ರೀತಿಯ ಹೋರಾಟಗಳು ನಡೆಯುತ್ತವೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಇದನ್ನೂ ಓದಿ: ಮುಸ್ಲಿಮರ ಓಟಿಗಾಗಿ ಆರ್‌ಎಸ್‌ಎಸ್ ಗೇಲಿ: ಸಿದ್ದರಾಮಯ್ಯ ವಿರುದ್ಧ ಮುತಾಲಿಕ್ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.