ಹಾವೇರಿ: ಜಿಲ್ಲೆಯಲ್ಲಿ ಅರೆಸರ್ಕಾರಿ ಮತ್ತು ಖಾಸಗಿ ಶಾಲೆಗಳು ಇಂದಿನಿಂದ ಪುನಾರಂವಾಗಿದ್ದು, ಕೃಷಿ ಸಚಿವ ಬಿ.ಸಿ. ಪಾಟೀಲ್ ಹಿರೇಕೆರೂರಿನ ಶಾಲಾ ಕಾಲೇಜ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಳಂಬೀಡ ಪ್ರೌಢಶಾಲೆ ಸೇರಿದಂತೆ ಹಿರೇಕೆರೂರು ಪಟ್ಟಣದ ಕಾಲೇಜ್ಗಳಿಗೆ ಸಚಿವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮೈಕ್ ಹಿಡಿದು ವಿದ್ಯಾರ್ಥಿಗಳಿಗೆ ಕೌರವ ಕೊರೊನಾ ನಿಯಮಗಳ ಕುರಿತು ಕ್ಲಾಸ್ ತಗೆದುಕೊಂಡರು.
ಎರಡು ವರ್ಷಗಳಿಂದ ಶಾಲಾ ಕಾಲೇಜ್ಗಳು ಕೊರೊನಾದಿಂದ ಬಂದ್ ಆಗಿದ್ದವು. ಎರಡನೇ ಅಲೆ ಮುಕ್ತಾಯ ಹಂತದಲ್ಲಿರುವ ಕಾರಣ ಶಾಲಾ ತರಗತಿಗಳನ್ನು ಆರಂಭಿಸಲಾಗಿದೆ. ಕೊರೊನಾ ನಮ್ಮ ಮಧ್ಯದಲ್ಲಿರುವ ಕಾರಣ ಎಚ್ಚರಿಕೆಯಿಂದ ಇರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಲ್ಲದೆ, ಮೂರನೇ ಅಲೆ ಬರುವ ಸಾಧ್ಯತೆ ಇದೆ. ಅದಕ್ಕಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲಿಸಬೇಕು. ಪದೇ ಪದೇ ಕೈಗಳನ್ನು ತೊಳೆದುಕೊಳ್ಳುತ್ತಿರಬೇಕು. ಕೋವಿಡ್ ಕುರಿತು ಜಾಗೃತರಾಗಿರಿ ಎಂದು ಬಿ. ಸಿ. ಪಾಟೀಲ್ ಕಿವಿಮಾತು ಹೇಳಿದರು.