ಹಾವೇರಿ : ಯಡಿಯೂರಪ್ಪಗೆ ಧಮ್ ಇರುವುದರಿಂದಲೇ ಮುಖ್ಯಮಂತ್ರಿಯಾಗಿದ್ದಾರೆ. ನಾವೆಲ್ಲ ಹೊರ ಬಂದು ಮಂತ್ರಿಯಾಗಿದ್ದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಬಿ ಸಿ ಪಾಟೀಲ್ ಟಾಂಗ್ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪಗೆ ಧಮ್ ಇಲ್ಲದಿದ್ರೆ ಸಿದ್ದರಾಮಯ್ಯ ಸಿಎಲ್ಪಿ ಲೀಡರ್ ಆಗಿಯೇ ಇರಬೇಕಿತ್ತು. ಇದೀಗ ಪ್ರತಿಪಕ್ಷ ಸ್ಥಾನ ಸಿಕ್ಕಿದೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್ ವಿಶ್ವನಾಥ್ ಸೇರಿ ಮೂವರು ಎಂಎಲ್ಸಿ ಆಗಬೇಕಿತ್ತು. ಈಗ ಹೆಚ್ ವಿಶ್ವನಾಥ್ಗೆ ಸ್ಥಾನ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ವಿಶ್ವನಾಥ್ಗೆ ಸ್ಥಾನ ಸಿಗುತ್ತೆ ಎಂದರು. ರಮೇಶ ಜಾರಕಿಹೊಳಿ ಮರಳಿ ಕಾಂಗ್ರೆಸ್ಗೆ ಬರುತ್ತಾರೆ ಎಂಬ ಈಶ್ವರ ಖಂಡ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಖಂಡ್ರೆ ಭ್ರಮೆಯಲ್ಲಿದ್ದಾರೆ. ಅವರು ನಮ್ಮನ್ನ ಸರಿಯಾಗಿ ನೋಡಿಕೊಂಡಿದ್ರೆ ನಾವ್ಯಾಕೆ ಹೊರಗೆ ಬರುತ್ತಿದ್ದೆವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ಧ ಕಿಡಿ ಕಾರಿದರು.