ETV Bharat / state

ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸಾರ್ಥಕ ಎನಿಸುತ್ತಿದೆ: ಸಚಿವ ಬಿ.ಸಿ. ಪಾಟೀಲ್

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಾಳಂಬೀಡದಲ್ಲಿ ನಡೆದ ಏತನೀರಾವರಿ ಯೋಜನೆಗಳ ಅಡಿಗಲ್ಲು ಸಮಾರಂಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ರೈತರ ಉದ್ಧಾರಕ್ಕೆ ಸಿಎಂ ಬಿಎಸ್​ವೈ ಸರ್ಕಾರ ಕೆಲಸ ಮಾಡುತ್ತಿದೆ. ಜನಪರ ಕೆಲಸ ಮಾಡಲು ನಾವು ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಕೊಟ್ಟಿರುವುದು ಸಾರ್ಥಕವೆನಿಸುತ್ತಿದೆ ಎಂದರು.

Minister B.C. Patil
ಬಿ.ಸಿ.ಪಾಟೀಲ್
author img

By

Published : Feb 24, 2020, 7:52 PM IST

ಹಾವೇರಿ: ಈ ರೀತಿಯ ರೈತ ಪರ ಸರ್ಕಾರ ಇರುವುದನ್ನು ನೋಡಿದರೆ ನಾನು ರಾಜೀನಾಮೆ ನೀಡಿದ್ದು ಸಾರ್ಥಕವಾಯಿತು ಎನಿಸುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸಾರ್ಥಕವಾಯಿತು- ಸಚಿವ ಬಿ.ಸಿ. ಪಾಟೀಲ್

ಹಾನಗಲ್ ತಾಲೂಕಿನ ಬಾಳಂಬೀಡದಲ್ಲಿ ನಡೆದ ಏತನೀರಾವರಿ ಯೋಜನೆಗಳ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ರಾಜ್ಯದ ರೈತರ ಉಳಿವಿಗಾಗಿ, ಜಿಲ್ಲೆಯ ಅಭಿವೃದ್ಧಿಗಾಗಿ ನಾನು ರಾಜೀನಾಮೆ ನೀಡಿ ಹೊರಬಂದಿದ್ದೇ ಒಳ್ಳೆಯದಾಯಿತು. ಅಲ್ಲದೇ ಈಗ ರಾಜ್ಯ ಕಂಡು ಕೇಳರಿಯದಂತಹ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ. ಇದನ್ನ ನೋಡಿ ಖುಷಿಯಾಗುತ್ತಿದೆ ಎಂದರು.

ದಿನದ 24 ಗಂಟೆಗಳ ಕಾಲ ಕೆಲಸ ಮಾಡುವ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಪಡೆದಿದ್ದಾರೆ. ಯಡಿಯೂರಪ್ಪನವರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕನಸು ಕಂಡಿದ್ದಾರೆ. ಅಲ್ಲದೇ ನಮ್ಮದು ರೈತ ಪರ, ಕೃಷಿ ಪರ ಸರ್ಕಾರವಾಗಿದೆ ಎಂದು ಬಿ.ಸಿ. ಪಾಟೀಲ್ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.