ETV Bharat / state

ನಮ್ಮ ರಾಜೀನಾಮೆಯಿಂದ ಬೊಮ್ಮಾಯಿ ಸಿಎಂ ಆದ್ರು, ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು: ಬಿಸಿ ಪಾಟೀಲ್

ರೈತರ ಟ್ರ್ಯಾಕ್ಟರ್​ಗೆ ಬಳಕೆಯಾಗುವ ಡೀಸೆಲ್​ಗೆ 250 ರೂಪಾಯಿ ಸಬ್ಸಿಡಿ ಕೊಡುತ್ತಿದ್ದೇವೆ. ಈ ತಿಂಗಳಲ್ಲಿ ಸಬ್ಸಿಡಿ ಹಣ ಬಿಡುಗಡೆ ಆಗುತ್ತದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು.

ನಮ್ಮ ರಾಜೀನಾಮೆಯಿಂದ ಬೊಮ್ಮಾಯಿ ಸಿಎಂ ಆದ್ರು, ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು: ಬಿಸಿ ಪಾಟೀಲ್
minister-bc-patil-on-haveri-district-mega-dairy
author img

By

Published : Sep 29, 2022, 3:52 PM IST

Updated : Sep 29, 2022, 5:45 PM IST

ಹಾವೇರಿ: ನಾವು ರಾಜೀನಾಮೆ ಕೊಟ್ಟು ಬಿಜೆಪಿಗೆ ಬರದೇ ಹೋಗದಿದ್ದರೆ ಹಾವೇರಿ ಜಿಲ್ಲೆಯ ಮೆಗಾ ಡೈರಿ ಕನಸು ಆಗುತ್ತಿರಲಿಲ್ಲವೇನೋ. ನಮ್ಮ ರಾಜೀನಾಮೆಯಿಂದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು ಮತ್ತೊಂದು ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಅಭಿಪ್ರಾಯ ಪಟ್ಟರು.

ನಮ್ಮ ರಾಜೀನಾಮೆಯಿಂದ ಬೊಮ್ಮಾಯಿ ಸಿಎಂ ಆದ್ರು, ಹಾವೇರಿ ಜಿಲ್ಲೆಗೆ ಮೆಗಾ ಡೈರಿ ಬಂತು: ಬಿಸಿ ಪಾಟೀಲ್

ಬ್ಯಾಡಗಿ ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ಇಂದು ನಡೆದ ಮೆಗಾ ಡೈರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜೀವನ ಸಾರ್ಥಕವಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಡೀಸೆಲ್​ ರೇಟ್ ಬಹಳ ಎತ್ತರದಲ್ಲಿದೆ. ರೈತರ ಟ್ರ್ಯಾಕ್ಟರ್​ಗೆ ಬಳಕೆಯಾಗುವ ಡೀಸೆಲ್​ಗೆ ರಿಯಾಯಿತಿ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಳಿದ್ದೆ. ಇದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದರು.

ಒಂದು ಎಕರೆಗೆ 250 ರೂಪಾಯಿ ಡೀಸೆಲ್​ ಸಬ್ಸಿಡಿ ಕೊಡುತ್ತಿದ್ದೇವೆ. ಈ ತಿಂಗಳಲ್ಲಿ ಸಬ್ಸಿಡಿ ಹಣ ಬಿಡುಗಡೆ ಆಗುತ್ತದೆ. ದೇಶದಲ್ಲಿ ಈ ರೀತಿಯಾಗಿ ರೈತರ ಟ್ರ್ಯಾಕ್ಟರ್ ಡೀಸೆಲ್​ಗೆ ಸಬ್ಸಿಡಿ ಹಣ ಕೊಡುತ್ತಿರುವುದು ಎಲ್ಲೂ ಇಲ್ಲ. ನಮ್ಮಲ್ಲಿ ಮಾತ್ರ ಡೀಸೆಲ್​ಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದು ಸಚಿವ ಬಿಸಿ ಪಾಟೀಲ್ ತಿಳಿಸಿದರು.

ಇದನ್ನೂ ಓದಿ: ನಾನು ಅಧಿಕಾರ ತ್ಯಾಗ ಮಾಡಿದ್ದೇನೆ, ನನಗೆ ಅನ್ಯಾಯವಾಗಿದೆ: ಎಂ ಪಿ ರೇಣುಕಾಚಾರ್ಯ ಅಸಮಾಧಾನ

Last Updated : Sep 29, 2022, 5:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.