ETV Bharat / state

ಬಿ.ಕೆ.ಹರಿಪ್ರಸಾದ್​ ಅವರನ್ನು ಪಿಂಪ್ ಎಂದು ಕರೆಯಬಹುದಾ?: ಸಚಿವ ಬಿ.ಸಿ.ಪಾಟೀಲ್

ಬಿ.ಕೆ.ಹರಿಪ್ರಸಾದ್​ ಯಾವ ಚುನಾವಣೆ ಗೆದ್ದು ಬಂದಿದ್ದಾರೆ?. ಅವರು ಹಿಂಬಾಗಿಲಿನಿಂದ ಬಂದು ಎಂಎಲ್​ಸಿ ಆದವರು. ಹಿಂಬಾಗಿಲಿನಿಂದ ಬಂದ ಇವರನ್ನು ಪಿಂಪ್ ಎಂದು ಕರೆಯಬಹುದಾ? ಎಂದು ಸಚಿವ ಬಿ.ಸಿ.ಪಾಟೀಲ್​ ತಿರುಗೇಟು ಕೊಟ್ಟರು.

Minister B C Patil
ಸಚಿವ ಬಿ.ಸಿ ಪಾಟೀಲ್
author img

By

Published : Jan 18, 2023, 9:56 AM IST

ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು

ಹಾವೇರಿ: ನಾವು 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ 2018ರಲ್ಲಿ ಚುನಾವಣೆ ಗೆದ್ದು ಬಂದು ಶಾಸಕರಾಗಿದ್ದೆವು. ಕಾಂಗ್ರೆಸ್‌ನವರು ಮಾಡಿದ ದ್ರೋಹದಿಂದ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದೆವು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಮಂಗಳವಾರ ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ಸ್ವಗೃಹದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ಗೆ ಹೋಗಿ ಅಲ್ಲಿಂದ 2019ರಲ್ಲಿ ಬಿಜೆಪಿಗೆ ಸೇರಿದೆವು. ಬಳಿಕ ಉಪಚುನಾವಣೆಯಲ್ಲಿ ಗೆದ್ದು ಈಗ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.

ಪಿಂಪ್ ಎಂದು ಕರೀಬಹುದಾ?: ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರ 'ವೇಶ್ಯೆ' ಹೇಳಿಕೆಗೆ ಸಚಿವ ಬಿ.ಸಿ.ಪಾಟೀಲ್ ಖಾರವಾಗಿ ತಿರುಗೇಟು ಕೊಟ್ಟರು. "ಹರಿಪ್ರಸಾದ್ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ. ನಾನು ಜನರಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ. ಹರಿಪ್ರಸಾದ್​ ಎಲ್ಲಿ ಆಯ್ಕೆಯಾಗಿದ್ದಾರೆ. ಅವರು ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. ಅವರು ಹಿಂದಿನ ಬಾಗಿಲಿನಿಂದ ಬಂದು ಶಾಸಕರಾಗಿದ್ದಾರೆ. ಈ ರೀತಿ ಹಿಂಬಾಗಿಲಿನಿಂದ ಬರುವವರಿಗೆ ಏನಂತ ಕರೆಯಬೇಕು?. ಬಹುಶಃ ಪಿಂಪ್ ಎಂದು ಕರೆಯಬಹುದಾ?. ಆದರೆ ಆ ರೀತಿ ಕರೆಯಲು ಆಗುವುದಿಲ್ಲ. ಇದು ಅವರ ಸಂಸ್ಕೃತಿ. ನಮ್ಮ ಸಂಸ್ಕೃತಿ ಬೇರೆ" ಎಂದರು. ಬಿ.ಕೆ ಹರಿಪ್ರಸಾದ್ ತಮ್ಮ ಸ್ಥಾನ, ಘನತೆಗೆ ತಕ್ಕಂತೆ ಗೌರವದಿಂದ ಮಾತನಾಡಿದರೆ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಜನ ಅವರನ್ನು ಬೆನ್ನತ್ತಿ ಹೊಡೆಯುತ್ತಾರೆ ಎಂದರು.

ಕಾಂಗ್ರೆಸ್ ಬುಡ ಅಲುಗಾಡುತ್ತಿದೆ: ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಕನಸಿನ ಸಾಮ್ರಾಜ್ಯ ಕಟ್ಟಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿದಿದ್ದಾರೆ. ಈಗಲೇ ಸಿಎಂ ಹುದ್ದೆಗೆ ಕಚ್ಚಾಡುತ್ತಿದ್ದಾರೆ. ಬಿಜೆಪಿ ಪಕ್ಷ ದಿನೇ ದಿನೇ ಪ್ರಬಲವಾಗುತ್ತಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರನ್ನು ತಲುಪುತ್ತಿವೆ. ಇದನ್ನು ಸಹಿಸಲಾರದೆ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಿ ಶಾಸಕರಾದವರ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ತಳ ಅಲುಗಾಡುತ್ತಿದೆ. ಅವರು ನೆಲೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಟಾಂಗ್​ ಕೊಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕಾಂಗ್ರೆಸ್‌ನವರು ಮಾಡಿದ ಹೊಲಸು ತೊಳೆದಿದ್ದಾರೆ. ಭಾರತದ ಆರ್ಥಿಕ ಸ್ಥಿತಿಯನ್ನು ಜಗತ್ತಿನಲ್ಲಿ 5ನೇ ಸ್ಥಾನಕ್ಕೆ ತಂದಿದ್ದಾರೆ. ಇವರ ಆಡಳಿತ ಇದ್ದಾಗ ಯಾವ ಸ್ಥಾನದಲ್ಲಿತ್ತು?, ಯಾವ ರೀತಿ ಗಲೀಜಾಗಿತ್ತು, ರೋಗಗ್ರಸ್ತವಾಗಿತ್ತು ಎಂಬುದನ್ನು ಅವರು ಮುಟ್ಟಿನೋಡಿಕೊಳ್ಳಲಿ. ಕಾಂಗ್ರೆಸ್‌ನವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಅವರ ಮನೆ ದೇವರು. ಜಾತಿ ಹೆಸರು ಹೇಳಿ ರಾಜಕೀಯ ಮಾಡಿಕೊಂಡು ಬಂದವರು ಎಂದು ವಾಗ್ದಾಳಿ ನಡೆಸಿದರು.

ಜನ ಈಗ ಅವರನ್ನು ಒಪ್ಪುತ್ತಿಲ್ಲ. ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದೆ. ಪ್ರಧಾನಿ ಮೋದಿ ಅವರು ಎರಡು ಬಾರಿ ಅಧಿಕ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಮೂರನೇಯ ಬಾರಿ ಸಹ ಅದಕ್ಕಿಂತ ಹೆಚ್ಚು ಸ್ಥಾನದಲ್ಲಿ ಆಯ್ಕೆಯಾಗಿ ಬರುತ್ತಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್‌ನವರು ನಾವು ರಾಜೀನಾಮೆ ನೀಡಿದ ನಂತರ ಬಳಸಿದ ಅವರು ಭಾಷೆ ಕೇಳಿದವರು, ಆತ್ಮ ಗೌರವ ಇರುವಂತವರು ಮತ್ತೆ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದರು.

ಬಿ.ಕೆ.ಹರಿಪ್ರಸಾದ್‌ ಹೇಳಿದ್ದೇನು?: ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ್ದ ಬಿ.ಕೆ.ಹರಿಪ್ರಸಾದ್, ವೇಶ್ಯೆಯರ ರೀತಿಯಲ್ಲಿ ಕೆಲವರು ಶಾಸಕ ಸ್ಥಾನ ಮಾರಿಕೊಂಡು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದರು ಎಂದು ವಾಗ್ದಾಳಿ ನಡೆಸಿದ್ದರು. ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ನಾಯಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ:ವಲಸಿಗರು ಸೇರಿದಂತೆ ಎಲ್ಲರಿಗೂ ಕಾಂಗ್ರೆಸ್ ಬಾಗಿಲು ಓಪನ್: ಬಿ ಕೆ ಹರಿಪ್ರಸಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.