ಹಾವೇರಿ: ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಡುವಿಲ್ಲದೆ ಕೆಲಸದಲ್ಲಿ ನಿರತರಾಗಿರೋ ಪೊಲೀಸರು ಹಾಗೂ ಪೌರಕಾರ್ಮಿಕರಿಗೆ ಹಾವೇರಿ ತಾಲೂಕಿನ ಅಗಡಿ ಅಕ್ಕಿಮಠದ ವತಿಯಿಂದ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶಿರಾ, ಉಪ್ಪಿಟ್ಟು ಮತ್ತು ಪಲಾವ್ ವ್ಯವಸ್ಥೆ ಮಾಡಿ, ಸ್ವತಃ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಪೊಲೀಸರು ಹಾಗೂ ಪೌರಕಾರ್ಮಿಕರಿಗೆ ಊಟ ಬಡಿಸಿದ್ರು.
ಪೊಲೀಸರು, ಪೌರಕಾರ್ಮಿಕರಿಗೆ ಊಟ ಬಡಿಸಿದ ಸ್ವಾಮೀಜಿ, ಪೊಲೀಸರು ಹಾಗೂ ಪೌರಕಾರ್ಮಿಕರ ಕೆಲಸವನ್ನ ಶ್ಲಾಘಿಸಿದ್ರು.