ಹಾವೇರಿ: ಲಂಚ ಪಡೆಯುತ್ತಿದ್ದಾಗ ರಾಣೆಬೆನ್ನೂರಿನ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಹಶೀಲ್ದಾರ್ ಹನುಮಂತಪ್ಪ ಶಿರಹಟ್ಟಿ ಹಾಗೂ ಅವರ ಕಾರು ಚಾಲಕನನ್ನು ಬಂಧಿಸಲಾಗಿದೆ.
ಮರಳು ಲಾರಿಗೆ ಗ್ರಾವೇಲ್ ತುಂಬಲು ತಹಶೀಲ್ದಾರ್ ಹನುಮಂತಪ್ಪ ರಾಣೆಬೆನ್ನೂರು ನಗರದ ನಿವಾಸಿಯಾದ ಲಾರಿ ಚಾಲಕ ಮಂಜು ವಾಲಿಕರ್ ಎಂಬವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆತನಿಂದ ಹಣ ಪಡೆಯುವ ಸಂದರ್ಭದಲ್ಲಿ ಹಾವೇರಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹನುಮಂತಪ್ಪ 20 ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದು, 12 ಸಾವಿರ ರೂ. ಸ್ವೀಕರಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಇಡಿ ಅಧಿಕಾರಿಗಳ ಮೇಲೆ ದಾಳಿ: ಕ್ರಮದ ಎಚ್ಚರಿಕೆ ನೀಡಿದ ರಾಜ್ಯಪಾಲ