ಹಾವೇರಿ: ಲಾಕ್ಡೌನ್ ಇರುವ ಹಿನ್ನೆಲೆ ನಗರದ ಬಹುತೇಕ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದರೂ ಕೂಡ ಕೆಲವು ಬೈಕ್ ಮತ್ತು ಕಾರ್ ಚಾಲಕರು ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.
ಹೀಗೆ ನಿಯಮ ಉಲ್ಲಂಘಿಸಿ ಓಡಾಡುವವರನ್ನು ಹಿಡಿದು ಪೊಲೀಸರು ದಂಡ ಹಾಕುತ್ತಿದ್ದಾರೆ. ಆದರೂ ಜನ ಓಡಾಡುವುದನ್ನು ಮಾತ್ರ ಕಡಿಮೆ ಮಾಡಿಲ್ಲ.
ಲಾಕ್ಡೌನ್ ಆರಂಭದಲ್ಲಿ ವಾಹನಗಳ ಓಡಾಟ ಕಡಿಮೆಯಾಗಿತ್ತು. ಆದರೀಗ ಒಂದರ ಹಿಂದೆ ಒಂದರಂತೆ ಮತ್ತೆ ವಾಹನಗಳು ರಸ್ತೆಗಿಳಿದು ಓಡಾಡ್ತಿವೆ. ಜಿಲ್ಲಾಡಳಿತ ಇನ್ನಷ್ಟು ಬಿಗಿ ಕ್ರಮಗಳನ್ನ ಕೈಗೊಂಡು ಬೇಕಾಬಿಟ್ಟಿ ಓಡಾಡ್ತಿರೋ ವಾಹನ ಸವಾರರಿಗೆ ತಕ್ಕ ಪಾಠ ಕಲಿಸಿ, ಕೊರೊನಾ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕಿದೆ.