ETV Bharat / state

ಹಾವೇರಿಯಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ.. ಪೊಲೀಸರಿಂದ ಲಾಠಿ ಚಾರ್ಜ್​,ಖಡಕ್​ ಎಚ್ಚರಿಕೆ! - haveri lockdown latest news

ಅಂಗಡಿಗಳ ಮುಂದೆ ನೆರೆದಿದ್ದವರು ಸಹ ಪೊಲೀಸರನ್ನ ಕಂಡು ಭಯಭೀತರಾಗಿ ಮನೆ ಸೇರಿದ್ದಾರೆ. ನಂತರ ಅಂಗಡಿಗಳನ್ನ ಬಂದ್ ಮಾಡಿಸಿದ ಪೊಲೀಸರು ಅಂಗಡಿಗಳ ಬಾಗಿಲು ತೆರೆದಿದ್ದವರನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Lockdown rule violation in Haveri....police took action
ಹಾವೇರಿಯಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ..ಪೊಲೀಸರಿಂದ ಲಾಠಿ ಚಾರ್ಜ್​, ಖಡಕ್​ ಎಚ್ಚರಿಕೆ
author img

By

Published : Apr 10, 2020, 12:25 PM IST

ಹಾವೇರಿ : ಭಾರತ ಲಾಕ್​ಡೌನ್ ನಿಯಮ ಉಲ್ಲಂಘಿಸಿ ಅಂಗಡಿಗಳನ್ನ ತೆರೆದವರಿಗೆ ಜಿಲ್ಲೆಯಲ್ಲಿ ಪೊಲೀಸರು ಬಿಸಿ-ಬಿಸಿ ಕಜ್ಜಾಯ ನೀಡಿ ಪ್ರಕರಣ ದಾಖಲಿಸುವ ಮೂಲಕ ಖಡಕ್ ಎಚ್ಚರಿಕೆ ನೀಡ್ತಿದ್ದಾರೆ.

ಲಾಕ್​ಡೌನ್​ ನಿಯಮ ಉಲ್ಲಂಘನೆ.. ಪೊಲೀಸರಿಂದ ಲಾಠಿ ಚಾರ್ಜ್

ನಿನ್ನೆ ಮತ್ತು ಇಂದು ನಗರದ ಹಲವೆಡೆ ಲಾಕ್​ಡೌನ್ ನಿಯಮ ಉಲ್ಲಂಘಿಸಿ ಮೊಬೈಲ್, ಪೇಂಟಿಂಗ್, ರೇಡಿಯಂ, ಚಪ್ಪಲಿ ಸೇರಿ ಕೆಲ ಅಂಗಡಿಗಳ ಬಾಗಿಲು ತೆರೆಯಲಾಗಿತ್ತು‌. ಇದನ್ನ ಕಂಡು ಗರಂ ಆದ ಪೊಲೀಸರು ಅಂಗಡಿ ಬಾಗಿಲು ತೆರೆದವರಿಗೆ ಲಾಠಿ ರುಚಿ ತೋರಿಸಿ ಬಿಸಿ ಮುಟ್ಟಿಸಿದ್ದಾರೆ. ಅಷ್ಟೇ ಅಲ್ಲ, ಅಂಗಡಿಗಳ ಮುಂದೆ ನೆರೆದಿದ್ದವರು ಸಹ ಪೊಲೀಸರನ್ನ ಕಂಡು ಭಯಭೀತರಾಗಿ ಮನೆ ಸೇರಿದ್ದಾರೆ. ನಂತರ ಅಂಗಡಿಗಳನ್ನ ಬಂದ್ ಮಾಡಿಸಿದ ಪೊಲೀಸರು ಅಂಗಡಿಗಳ ಬಾಗಿಲು ತೆರೆದಿದ್ದವರನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ನಗರದ ಲಕ್ಕಿ ಸೂಪರ್‌ ಮಾರ್ಕೆಟ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಅಲ್ಲೂ ಸಹ ಪೊಲೀಸರು ಬಿಸಿಬಿಸಿ ಕಜ್ಜಾಯ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಎಸ್​ಪಿ ಕೆಜಿ ದೇವರಾಜ ನಗರದಲ್ಲಿ ಸಂಚರಿಸಿ ಲಾಕ್​ಡೌನ್ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ, ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಮುಲಾಜಿಲ್ಲದೆ ಕೇಸ್ ದಾಖಲಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.