ETV Bharat / state

'ಇದೊಂದು ನರಸತ್ತ ಸರ್ಕಾರ': ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ - KPCC working president salim ahmad pressmeet at haveri

ರಾಜ್ಯದಲ್ಲಿ ಅಭಿವೃದ್ಧಿ ಕಾಣಬೇಕಿತ್ತು, ಅದರೆ ಕೊಲೆಗಳನ್ನು ಕಾಣುತ್ತಿದ್ದೇವೆ. ಇದೊಂದು ನರಸತ್ತ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದರು.

kpcc-working-president-salim-ahmad-statement-against-cm-bommai-and-govt
ಇದೊಂದು ನರಸತ್ತ ಸರ್ಕಾರ : ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
author img

By

Published : Aug 1, 2022, 8:09 PM IST

ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಒಂದೇ ಸಮಾಜದ ಸಿಎಂ ಅಲ್ಲ. ಎಲ್ಲ ಜನಾಂಗದವರ ಮುಖ್ಯಮಂತ್ರಿ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡಲು ಬಿಡಬೇಡಿ ಎಂದು ಕಾಂಗ್ರೆಸ್‌ ಮುಖಂಡ ಸಲೀಂ ಅಹ್ಮದ್ ಹೇಳಿದರು. ಸಮಾಜ ಒಡೆಯುವ ಸಂಘಟನೆಗಳನ್ನು ನಿಷೇಧಿಸಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ‌ ಸರಕಾರವಿದೆ. ಇಂತಹ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಅವರು ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಲೀಂ ಅಹ್ಮದ್‌

ರಾಹುಲ್ ಗಾಂಧಿ ರಾಜ್ಯ ಪ್ರವಾಸ: ನಾಳೆಯಿಂದ ಎರಡು ದಿನಗಳ ಕಾಲ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಮಂಗಳವಾರ ಮಧ್ಯಾಹ್ನ 2.30 ಗಂಟೆಗೆ ಅವರು ಹುಬ್ಬಳ್ಳಿಗೆ ಆಗಮಿಸುತ್ತಾರೆ. ರಾತ್ರಿ 8 ಗಂಟೆಗೆ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ನ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಆಗಸ್ಟ್ 03 ರಂದು ಬೆಳಿಗ್ಗೆ ಚಿತ್ರದುರ್ಗದ ಮಠಗಳಿಗೆ ತೆರಳಿ ಮಠಾಧೀಶರ ಆಶೀರ್ವಾದ ಪಡೆದು ನಂತರ ಮಧ್ಯಾಹ್ನ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಪಾಲ್ಗೊಳ್ಳುವರು. ಬಳಿಕ ಸಂಜೆ ದೆಹಲಿಗೆ ಪಯಣಿಸಲಿದ್ದಾರೆ ಎಂದು ಸಲೀಂ ಅಹ್ಮದ್ ಮಾಹಿತಿ ನೀಡಿದರು.

ಇದನ್ನೂ ಓದಿ:ಸಾಂತ್ವನ ವಿಚಾರದಲ್ಲೂ ತಾರತಮ್ಯ ಆರೋಪ: ಮಸೂದ್, ಫಾಝಿಲ್ ನಿವಾಸಕ್ಕೂ ಭೇಟಿ ನೀಡಲಿದ್ದಾರೆ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.