ಹಾವೇರಿ: ತಹಸೀಲ್ ಕಚೇರಿಯಲ್ಲಿನ ಅಸ್ವಚ್ಚತೆ ಕಂಡು ಶಾಸಕ ಬಿ.ಸಿ ಪಾಟೀಲ್ ಗರಂ ಆದ ಘಟನೆ ಜಿಲ್ಲೆಯ ಹಿರೇಕೆರೂರಿನಲ್ಲಿ ನಡೆದಿದೆ.
ಅಂಬಿಗರ ಚೌಡಯ್ಯ ಜಯಂತಿ ಮುಗಿಸಿ ತಹಸೀಲ್ ಕಚೇರಿ ವೀಕ್ಷಣೆ ಮಾಡಿದ ಹಿರೇಕೆರೂರು ಶಾಸಕ ಅಲ್ಲಿಯ ಮಲೀನತೆ ಕಂಡು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಕಚೇರಿಯಲ್ಲಿ ಗುಮಾಸ್ತರಿಲ್ಲವಾ? ನಿಮ್ಮ ಮನೆಯನ್ನ ನೀವು ಹೀಗೆ ಇಟ್ಟುಕೊಂಡಿರ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲೀನತೆ ನಡುವೆ ಕೆಲಸ ಮಾಡುವವರ ಮನಸು ಸಹ ಮಲೀನಗೊಂಡಿರುತ್ತದೆ ಎಂದು ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡಿದ್ದಾರೆ. ಶಾಸಕರ ಆಕ್ರೋಶ ಕಂಡ ಅಧಿಕಾರಿಗಳು ಕೆಲಕಾಲ ತಬ್ಬಿಬ್ಬಾಗಿದ್ದಾರೆ. ಇನ್ಮುಂದೆ ಕಚೇರಿಯನ್ನ ಸ್ವಚ್ಚವಾಗಿಟ್ಟುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.