ಹಾವೇರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತಸಂಘ ಪರ್ಯಾಯ ರಾಜಕಾರಣ ಕೈಗೊಳ್ಳಲಿದೆ. ಇದೇ ತಿಂಗಳ 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತತ್ವ ಸಿದ್ದಾಂತಗಳಿಲ್ಲದ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರಿದ್ದಾರೆ ಎಂದು ಆರೋಪಿಸಿದರು.
ಮಾವು ಮಾರಾಟದಲ್ಲಿ ಹಿಂದೂ-ಮುಸ್ಲಿಂ ವಿಚಾರ ಕುರಿತಂತೆ ಮಾತನಾಡಿದ ಅವರು, ರಾಮನಗರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಾವು ಉತ್ಪಾದನೆ ಮಾಡಲಾಗುತ್ತೆ. ಅಲ್ಲಿ ಮಾರುಕಟ್ಟೆ ನಡೆಯೋದೇ ಮುಸ್ಲಿಮರಿಂದ. ಅವರು ಬೆಲೆ ಸರಿಯಾಗಿ ಕೊಡೋದಿಲ್ಲ ಅಂತಾನೋ ಅಥವಾ ಮುಸ್ಲಿಮರು ಅನ್ನೋದಕ್ಕೋ ಏನೋ ಅವರಿಂದ ಮಾವು ಖರೀದಿಸಬೇಡಿ ಎಂದು ಹೇಳುತ್ತಿರಬಹುದು ಎಂದು ಅವರು ಹೇಳಿದರು. ಮಾವು ವಾರ್ಷಿಕ ಬೆಳೆ, ಈ ಬಾರಿ ಫಸಲು ಕಡಿಮೆ ಇದೆ. ಮಾವಿಗೆ ವೈಜ್ಞಾನಿಕ ದರ ನೀಡಿ ಎಂದು ಘೋಷಣೆ ಮಾಡುವಂತೆ ಎಂದು ಇದೇ ವೇಳೆ ಅವರು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: ಮುಸ್ಕಾನ್ ಮುಗ್ಧ ಹುಡುಗಿ.. ಅಲ್ಖೈದಾದಿಂದ ಜನರ ಮುಗ್ಧತೆ ಅಸ್ತ್ರವಾಗಿ ಬಳಕೆ: ಸಚಿವ ಸುಧಾಕರ್