ಹಾವೇರಿ: ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರು ತಮಗೆ 20 ಕೋಟಿ 50 ಲಕ್ಷದ 79 ಸಾವಿರದ 402 ರೂ.ಗಳ ಆಸ್ತಿ ಇರುವುದಾಗಿ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.
ತಮ್ಮ ಹೆಸರಲ್ಲಿ 9 ಕೋಟಿ 93 ಲಕ್ಷದ 96 ಸಾವಿರದ 628 ರೂ. ಚರಾಸ್ತಿ ಹಾಗೂ 59 ಲಕ್ಷದ 40 ಸಾವಿರ ರೂ ಸ್ಥಿರಾಸ್ತಿ ಇದೆ. ತಮ್ಮ ಪತ್ನಿಯ ಹೆಸರಲ್ಲಿ 40 ಲಕ್ಷ 83 ಸಾವಿರದ 99 ರೂ. ಚರಾಸ್ತಿ ಸೇರಿ 8 ಕೋಟಿ 93 ಲಕ್ಷದ 9,200 ರೂ. ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ.
ಇನ್ನು, ಕೋಳಿವಾಡ ಅವರು 46 ಲಕ್ಷದ 21 ಸಾವಿರದ 500 ರೂಪಾಯಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದು, ಅವರ ಪತ್ನಿ 14 ಲಕ್ಷ 15 ಸಾವಿರದ 975 ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿರುತ್ತಾರೆ.
ಬ್ಯಾಂಕುಗಳಲ್ಲಿ ಸುಮಾರು 15 ಕೋಟಿ 15 ಲಕ್ಷದ 32 ಸಾವಿರದ 408 ರೂ. ಸಾಲ ಇರುವುದಾಗಿ ನಾಮಪತ್ರದಲ್ಲಿ ತಿಳಿಸಿದ್ದಾರೆ.