ETV Bharat / state

ಕರ್ನಾಟಕ ವೈಚಾರಿಕ ಹಬ್ಬಕ್ಕೆ ಕ್ಷಣಗಣನೆ, ಸಿದ್ದವಾಗುತ್ತಿದೆ ಬೃಹತ್​ ವೇದಿಕೆ

author img

By

Published : Jan 15, 2020, 6:15 PM IST

ರಾಣೆಬೆನ್ನೂರಿನಲ್ಲಿ ಜ.17 ರಿಂದ 19 ರವರೆಗೆ ನಡೆಯುವ ಕರ್ನಾಟಕ ವೈಭವ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೃಹತ್ ವೇದಿಕೆ ಸಿದ್ದಪಡಿಸಲಾಗುತ್ತಿದೆ.

karnataka-vaibav-festival
ಕರ್ನಾಟಕ ವೈಚಾರಿಕ ಹಬ್ಬಕ್ಕೆ ಕ್ಷಣಗಣನೆ,

ಹಾವೇರಿ: ರಾಣೆಬೆನ್ನೂರಿನಲ್ಲಿ ಜ.17 ರಿಂದ 19 ರವರೆಗೆ ಕರ್ನಾಟಕ ವೈಭವ ವೈಚಾರಿಕ ಹಬ್ಬ ಎಂಬ ಶೀರ್ಷಿಕೆ ಅಡಿಯಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೃಹತ್ ವೇದಿಕೆ ಸಿದ್ದಪಡಿಸಲಾಗುತ್ತಿದೆ.

ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ, ರಾಣೆಬೆನ್ನೂರು ಪರಿವರ್ತನಾ ರಾಷ್ಟ್ರವಾದಿ ಚಿಂತಕರ ವೇದಿಕೆ ಹಾಗೂ ರಾಜ್ಯದ ಪ್ರತಿಷ್ಠಿತ 7 ವಿಶ್ವವಿದ್ಯಾಲಯಗಳ ಸಂಯೋಜನೆಯಲ್ಲಿ ಕರ್ನಾಟಕ ವೈಭವ ಹಬ್ಬವನ್ನು ಆಯೋಜಿಸಲಾಗಿದೆ.

ಕರ್ನಾಟಕ ವೈಚಾರಿಕ ಹಬ್ಬಕ್ಕೆ ಕ್ಷಣಗಣನೆ

ಕಾರ್ಯಕ್ರದಲ್ಲಿ ಕನ್ನಡ ನಾಡ-ನುಡಿ, ನೆಲ-ಜಲ, ಕನ್ನಡ ಸಂಸ್ಕೃತಿಯನ್ನು ನಾಡಿನಾದ್ಯಂತ ಬಿಂಬಿಸುವುದು, ಸಿಎಂ ಯಡಿಯೂರಪ್ಪ ಸೇರಿದಂತೆ ಸರ್ಕಾರದ ಸಚಿವರುಗಳು ಹಾಗೂ ಸುಮಾರು 19 ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗಿಯಾಗಲಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ದಾಸವಾಣಿ, ಕನ್ನಡ ಭಾಷೆ ಸಾಹಿತ್ಯ, ಕರ್ನಾಟಕದ ರಾಜಮನೆತನಗಳ ಹಿನ್ನೆಲೆ, ಕಲಾ ವೈಭವ, ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಪಾತ್ರ, ಯುವ ಗೋಷ್ಠಿ, ಕವಿ ಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಹಾಗೂ ಉಪನ್ಯಾಸ ನಡೆಯಲಿವೆ ಎಂದು ಕಾರ್ಯಕ್ರಮದ ಸಂಚಾಲಕ ಡಾ.ನಾರಾಯಣ ಪವಾರ ತಿಳಿಸಿದ್ದಾರೆ.

Intro:Kn_rnr_02_Karnataka_vaibhav_festival_kac10001.

ಕರ್ನಾಟಕ ವೈಭವ ಹಬ್ಬಕ್ಕೆ ‌ಕ್ಷಣಗಣನೆ..

ಹಾವೇರಿ: ರಾಣೆಬೆನ್ನೂರ ನಗರದಲ್ಲಿ ಇದೆ ಜ.17 ರಿಂದ 19 ರವರೆಗೆ ನಡೆಯುವ ಕರ್ನಾಟಕ ವೈಭವ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೃಹತ್ ವೇದಿಕೆ ಸಿದ್ದಪಡಿಸಲಾಗುತ್ತಿದೆ.

Body:ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಜ.17,18 ಮತ್ತು 19ರಂದು ರಾಣೆಬೆನ್ನೂರ ಪರಿವರ್ತನಾ ರಾಷ್ಟ್ರವಾದಿ ಚಿಂತಕರ ವೇದಿಕೆ ಹಾಗೂ ರಾಜ್ಯದ ಪ್ರತಿಷ್ಠಿತ 7 ವಿಶ್ವವಿದ್ಯಾಲಯಗಳ ಸಂಯೋಜನೆ ನಡುವೆ ನಡೆಯುತ್ತಿರುವ ವೈಚಾರಿಕ ಹಬ್ಬವನ್ನು ಆಯೋಜಿಸಲಾಗಿದೆ.

ಈ ವೈಚಾರಿಕ ಹಬ್ಬದಲ್ಲಿ ಕನ್ನಡ ನಾಡ-ನುಡಿ, ನೆಲ ಜಲ, ಕನ್ನಡ ಸಂಸ್ಕೃತಿಯನ್ನು ನಾಡಿನಾದ್ಯಂತ ಬಿಂಬಿಸುವಂತಾಗಿದೆ. ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಸಿಎಂ ಯಡಿಯೂರಪ್ಪ ಸೇರಿದಂತೆ ಸರ್ಕಾರದ ಸಚಿವರು, ವಿವಿಧ ಗಣ್ಯರು ಹಾಗೂ ಸುಮಾರು 19 ವಿಶ್ವವಿದ್ಯಾಲಯಗಳ ಕುಲಪತಿಗಳು ಭಾಗಿಯಾಗಲಿದ್ದಾರೆ.

ಮೂರು ದಿನಗಳ ನಡೆಯುವ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಮರಳು ಕಲೆ, ದಾಸವಾಣಿ, ಕನ್ನಡ ಭಾಷೆ ಸಾಹಿತ್ಯ, ಕರ್ನಾಟಕದ ರಾಜಮನೆತನಗಳ ಹಿನ್ನೆಲೆ, ಕಲಾ ವೈಭವ, ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ಪಾತ್ರ, ನೃತ್ಯ ರೂಪಕ, ಭಕ್ತಿ ಆಂದಲೋನ, ಭಾರತ ವಿಕಾಸಕ್ಕೆ ಕರ್ನಾಟಕ ಪಾತ್ರ, ಕನ್ನಡ ಪತ್ರಿಕಾ ರಂಗದ ಸವಾಲುಗಳು, ಯುವ ಗೋಷ್ಠಿ, ಕವಿ ಗೋಷ್ಠಿ, ಮಹಿಳಾ ಗೋಷ್ಠಿ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಹಾಗೂ ಉಪನ್ಯಾಸ ನಡೆಯಲಿವೆ.
Conclusion:ಇವೆಲ್ಲ ಕಾರ್ಯಕ್ರಮಗಳು ಕನ್ನಡ ನಾಡಿನ ಜನತೆಗೆ ವಿಚಾರ ಹಾಗೂ ವೈವಿಧ್ಯಮಯ ಬದಲಾವಣೆಗೆ ಸಾಧ್ಯವಾಗಲಿವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎನ್ನುತ್ತಾರೆ ಡಾ.ನಾರಾಯಣ ಪವಾರ.

Byte1_ ಡಾ.ನಾರಾಯಣ ಪವಾರ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.