ETV Bharat / state

ಉಡುಪಿ ಪ್ರಕರಣದ ತನಿಖಾ ವರದಿ ಬಂದ ಮೇಲೆ ಸತ್ಯಾಸತ್ಯತೆ ಗೊತ್ತಾಗಲಿದೆ: ಜಗದೀಶ್​ ಶೆಟ್ಟರ್

ಸವಣೂರು ತಾಲೂಕಿನ ಬಣಜಿಗ ಸಮಾಜ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಿಎಂಗಳಾದ ಜಗದೀಶ್​ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

author img

By

Published : Jul 30, 2023, 9:15 PM IST

Updated : Jul 30, 2023, 9:50 PM IST

jagdish-shettar-reaction-on-udupi-case-in-haveri
ಉಡುಪಿ ಪ್ರಕರಣದ ತನಿಖಾ ವರದಿ ಬಂದ ಮೇಲೆ ಸತ್ಯಾಸತ್ಯತೆ ಗೊತ್ತಾಗಲಿದೆ: ಜಗದೀಶ್​ ಶೆಟ್ಟರ್
ಮಾಜಿ ಸಿಎಂ ಜಗದೀಶ್​ ಶೆಟ್ಟರ್

ಹಾವೇರಿ: ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಮುಖಂಡ ಜಗದೀಶ್​ ಶೆಟ್ಟರ್ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹಾವೇರಿ ಜಿಲ್ಲೆ ಸವಣೂರಿನಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಸವಣೂರಿನ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸವಣೂರು ತಾಲೂಕಿನ ಬಣಜಿಗ ಸಮಾಜ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಭಯ ನಾಯಕರು ಪಾಲ್ಗೊಂಡಿದ್ದರು. ಈ ಕುರಿತಂತೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ನಾನು ಲಿಂಗಾಯತ ಬಣಜಿಗ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಅವರು ಈ ಭಾಗದ ಶಾಸಕರು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಆಶ್ಚರ್ಯಪಡುವಂತದು ಏನಿದೆ? ಎಂದು ಪ್ರಶ್ನಿಸಿದರು.

ಸಮಾಜದ ಬಂಧುಗಳು ಮಸ್ಕಿ, ಧಾರವಾಡ ಇವತ್ತು ಸವಣೂರು ಕಾರ್ಯಕ್ರಮಕ್ಕೆ ಕರೆದಿದ್ದರು. ಅಲ್ಲೆಲ್ಲಾ ಹೋಗಿದ್ದು, ಮುಂದಿನ ವಾರ ಬಳ್ಳಾರಿಗೆ ಹೋಗುವುದಾಗಿ ಶೆಟ್ಟರ್ ತಿಳಿಸಿದರು. ಹೀಗಾಗಿ ಸಹಜವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ತಾವು ಒಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಾಗಿ ಶೆಟ್ಟರ್​ ತಿಳಿಸಿದರು.

ಉಡುಪಿ ಪ್ರಕರಣದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಹಿಳಾ ಆಯೋಗದ ಸದಸ್ಯೆ ಖುಷ್ಟೂ ಅವರೆ ಬಂದು ಹೇಳಿದ್ದಾರೆ ಅದಕ್ಕೆ ಸಮಯಬೇಕು ಎಂದು. ಅಲ್ಲದೆ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಮೇಲೆ ಪ್ರಕರಣದ ಸತ್ಯಾಸತ್ಯತೆ ಗೊತ್ತಾಗಲಿದೆ. ಬಿಜೆಪಿಯವರ ಆರೋಪಕ್ಕೆ ಮಹಿಳಾ ಆಯೋಗದ ಸದಸ್ಯೆಯರು ಬಂದು ಹೋಗಿರುವುದೇ ಉತ್ತರ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್​ ಇದೊಂದು ಮಕ್ಕಳಾಟ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದರು.

ಡಿಸಿಎಂ ಡಿ. ಕೆ. ಶಿವಕುಮಾರ್ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಈ ವರ್ಷ ಹೆಚ್ಚು ಅಭಿವೃದ್ಧಿ ಕೆಲಸಗಳಿಗೆ ಹಣ ನೀಡಲಾಗುವುದಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಜಗದೀಶ್​, ಐದು ಗ್ಯಾರಂಟಿ ಯೋಜನೆಗಳು ಬಡವರ ಕಲ್ಯಾಣಕ್ಕಾಗಿಯೇ. ಉಚಿತ ಬಸ್, ಉಚಿತ ಅಕ್ಕಿ, ಎರಡು ಸಾವಿರ ರೂ.ಗಳನ್ನು ಮಹಿಳೆಯರ ಅಕೌಂಟಿಗೆ ಹಾಕುವುದು, ನಿರುದ್ಯೋಗ ವೇತನ ಬಡವರಿಗೆ ತಲುಪುವ ಯೋಜನೆಗಳಾಗಿವೆ. ಸರ್ಕಾರ ಇಲಾಖೆಗಳಿಗೆ ಖರ್ಚು ಮಾಡುವುದಕ್ಕೆ ಹಣ ಇದೆ. ಆದರೆ ಹೊಸ ಯೋಜನೆಗಳನ್ನು ಜಾರಿಗೆ ತರಲು ಹಣದ ಕೊರತೆ ಇದೆ ಎಂದು ಡಿ ಕೆ ಶಿವಕುಮಾರ್​ ಅವರ ಅಭಿಪ್ರಾಯ ಇರಬಹುದು ಎಂದು ಸಮರ್ಥಿಸಿಕೊಂಡರು.

ಇನ್ನು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿನ ಪ್ರಕರಣಗಳನ್ನು ಸುಲಭವಾಗಿ ವಾಪಸ್ ಪಡೆದುಕೊಳ್ಳಲು ಬರುವುದಿಲ್ಲಾ. ಅವರು ಪತ್ರ ಕೊಟ್ಟಿದ್ದಾರೆ, ಅದನ್ನು ಪರಿಶೀಲನೆ ಮಾಡಲಾಗುತ್ತಿದೆ ಮತ್ತು ಪ್ರಕರಣ ವಾಪಸ್ ಪಡೆಯಲು ನ್ಯಾಯಾಲಯದ ವರದಿ ಬೇಕು. ಐಎಎಸ್ ಅಧಿಕಾರಿಯ ವರದಿ ಬೇಕು. ಅದು ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಗದೀಶ್​ ಶೆಟ್ಟರ್ ಪ್ರತಿಕ್ರಿಯಿಸಿದರು.

ಬಳಿಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕನ ಆಯ್ಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಅತಿ ಶೀಘ್ರದಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆ ಆಗಲಿದೆ ಎಂದು ಹೇಳುತ್ತಿದ್ದಾರೆ. ಅದರ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಿಲ್ಲ, ಪೂರ್ಣ ಮಾಹಿತಿ ಇಲ್ಲ ಎಂದರು. ಸಿ ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಅವರು ಇವೆಲ್ಲಾ ವಿಚಾರಗಳು ಅಧಿಕೃತವಾಗಿ ಎಲ್ಲಿಯೂ ಘೋಷಣೆಯಾಗಿಲ್ಲಾ. ಈ ಕುರಿತಂತೆ ಹೈಕಮಾಂಡ್ ದೆಹಲಿಗೆ ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಶಾಸಕ ಬಿ ಆರ್ ಪಾಟೀಲ್ ಕ್ಷಮೆ ಯಾರೂ ಕೇಳಿಲ್ಲ: ಇಂಧನ ಸಚಿವ ಕೆ ಜೆ ಜಾರ್ಜ್

Last Updated : Jul 30, 2023, 9:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.