ಹಾವೇರಿ : ಕೊರೊನಾ ಮಹಾಮಾರಿ ದೇಶದಿಂದ ತೊಲಗಲು ಹುಕ್ಕೇರಿ ಮಠದಲ್ಲಿ ಇಷ್ಟಲಿಂಗ ಪೂಜೆ ನೆರೆವೇರಿಸಲಾಯಿತು.
ಮಠದ ಸದಾಶಿವ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಅಂಗೈಯಲ್ಲಿ ಲಿಂಗ ಹಿಡಿದು ಪಂಚಾಮೃತದಿಂದ ಅಭಿಷೇಕ ಮಾಡಿದರು. ನಂತರ ಲಿಂಗಕ್ಕೆ ವಿಭೂತಿ ಹಚ್ಚಿ ಬಿಲ್ವಪತ್ರಿ ಪುಷ್ಪ ಅರ್ಪಿಸಿ ಮಂಗಳಾರತಿ ಬೆಳಗಿದರು.
ಜಗತ್ತು ಆದಷ್ಟು ಬೇಗ ಈ ಸಂಕಷ್ಟದಿಂದ ಪಾರಾಗಲಿ ಎಂದು ಪ್ರಾರ್ಥಿಸಿದರು.