ಹಾವೇರಿ: ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕುವಂತಿಲ್ಲಾ ಎಂಬ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ ಎಂಬ ವದಂತಿ ಹಬ್ಬುತ್ತಿದೆ. ಈ ವಿಚಾರ ಕುರಿತಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.
ನಾನು ಸರ್ಕಾರಕ್ಕೆ ಪ್ರಶ್ನೆ ಕೇಳ್ತಿನಿ, ಈ ಹಿಂದೆ ಎಲ್ಲರೂ ಬಳೆ ಹಾಕಿಕೊಂಡು ಕೆಲಸ ಮಾಡಿದಾರೆ. ಅಂದು ಯಾವ ತೊಂದರೆ ಆಗಿಲ್ಲಾ. ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹತ್ತು ಹಲವು ಬೇಕಾದಷ್ಟು ಕೆಲಸಗಳು ಇವೆ. ಇವರು ಕೆಲಸಕ್ಕೆ ಬಾರದ ಕೆಲಸಗಳನ್ನು ಮಾಡ್ತಾ ಎಂದರು.
ಅಧಿಕಾರಿಗಳ ವಲಯದಲ್ಲಿ ಬಹಳ ದೊಡ್ಡ ಚರ್ಚೆ ಆಗ್ತಾ ಇದೆ: ಪ್ರತಿಪಕ್ಷ ನಾಯಕ ಆಯ್ಕೆ ವಿಚಾರ ಕುರಿತಂತೆ ಮಾತನಾಡಿದ ಅವರು, ಅದು ನಮ್ಮ ಪಕ್ಷಕ್ಕೆ ಬಿಟ್ಟಿದ್ದು. ಆದಷ್ಟು ಬೇಗ ಮಾಡ್ತಾರೆ. ನಮ್ಮ ಪಕ್ಷ ನಿರ್ಣಯ ಮಾಡುತ್ತದೆ. 18 ನೇ ತಾರೀಖಿನ ನಂತರ ತೀರ್ಮಾನ ಆಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು. ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಪ್ರಿಯಾಂಕ್ ಖರ್ಗೆ, ಯತೀಂದ್ರ ಸರ್ಕಾರದಲ್ಲಿ ಸ್ಯಾಡೊ ಸಿಎಂ ಆಗಿ ವರ್ತಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಹಲವು ವಿಚಾರ ಎತ್ತಿದ್ದೆವು. ಸಿಎಂ ಆಫೀಸ್ನಿಂದ ಹಿಡಿದು ಎಲ್ಲಾ ಕಡೆಗೂ ಹೊರಗಿನವರು ಹಸ್ತಕ್ಷೇಪ ಮಾಡ್ತಾ ಇದ್ದಾರೆ. ಸಿಎಂ ವರ್ಗಾವಣೆಯಲ್ಲಿ ನಾನು ಯಾವುದಕ್ಕೂ ಹಣ ತಗೊಂಡಿಲ್ಲಾ ಅಂತಾರೆ. ಸಿಎಂ ಸ್ವಂತಕ್ಕೆ ಹಣ ತಗೊಂಡಿಲ್ಲಾ ಅಂತಾ ಜಾರಿಕೊಳ್ತಾ ಇದಾರೆ. ಇಡೀ ಅವರ ಸರ್ಕಾರ ಸಚಿವ ಸಂಪುಟದ ಸದಸ್ಯರು, ಭಂಟರು ತಗೊಳ್ತಾ ಇರೋದು ಸ್ಪಷ್ಟವಾಗಿದೆ. ಈ ಬಗ್ಗೆ ಅಧಿಕಾರಿಗಳ ವಲಯದಲ್ಲಿ ಬಹಳ ದೊಡ್ಡ ಚರ್ಚೆ ಆಗ್ತಾ ಇದೆ ಎಂದು ಬೊಮ್ಮಾಯಿ ಹೇಳಿದ್ರು.
ಅದನ್ನು ಮುಚ್ಚಿಹಾಕುವ ಸಲುವಾಗಿ ನಾನು ತಗೊಂಡಿಲ್ಲಾ, ತಗೊಂಡಿದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೀನಿ ಅಂತಾರೆ. ಅಂದರೆ ಅದರ ಅರ್ಥ ಸರ್ಕಾರದಲ್ಲಿ ಬೇರೆಯವರು ತಗೊಂಡ್ರೆ ಮುಖ್ಯಮಂತ್ರಿಗಳ ಜವಾಬ್ದಾರಿ ಮುಗಿತಾ.? ಎಲ್ಲಾ ಸ್ಪಷ್ಟವಾಗಿ ಕಾಣ್ತಾ ಇದೆ. ಸಿಎಂ ಸಿದ್ದರಾಮಯ್ಯ ಜಾರಿಕೊಳ್ಳುವ ಪ್ರಯತ್ನ ಮಾಡ್ತಾ ಇದಾರೆ ಎಂದು ಬೊಮ್ಮಾಯಿ ಆರೋಪಿಸಿದರು.
ಇದನ್ನೂ ಓದಿ: ಬಿಸಿಯೂಟ ನೌಕರರಿಗೆ ಗುಡ್ ನ್ಯೂಸ್ : ಗೌರವಧನ ₹1,000 ಹೆಚ್ಚಿಸಿ ಆದೇಶ
ಜೆಡಿಎಸ್ ಮೈತ್ರಿ ವಿಚಾರ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅದನ್ನು ವರಿಷ್ಠರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು. RSS ಗೆ ನೀಡಿದ್ದ ಜಮೀನು ಮಂಜೂರು ಹಿಂಪಡೆದ ವಿಚಾರ ಕುರಿತಂತೆ ಮಾತನಾಡಿದ ಅವರು, ಇದು ಸೇಡಿನ ರಾಜಕಾರಣ. ಅದರಲ್ಲಿ ಬಡವರ ಮಕ್ಕಳಿಗೆ, ಅನಾಥರಿಗೆ ದೊಡ್ಡ ಸಹಾಯ ಆಗಿದೆ. ಶಿಕ್ಷಣದಲ್ಲಿ ದೊಡ್ಡ ಕೆಲಸ ಮಾಡ್ತಾ ಇದೆ. ಕ್ಯಾಬಿನೆಟ್ ಗೆ ಅಧಿಕಾರ ಇದೆ. ಇದು ಸೇಡಿನ ರಾಜಕಾರಣ. ಅದು ಬಹಳ ದಿನ ನಡೆಯಲ್ಲಾ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಜೆಡಿಎಸ್ ಜೊತೆ ಮೈತ್ರಿ ನಮ್ಮ ವರಿಷ್ಠರಿಗೆ ಬಿಟ್ಟಿದ್ದು: ಬಸವರಾಜ್ ಬೊಮ್ಮಾಯಿ