ETV Bharat / state

ಅಂತರ್​ಜಿಲ್ಲಾ ಬೈಕ್ ಕಳ್ಳನ ಬಂಧನ: 6 ಬೈಕ್​ಗಳು ವಶ - 6 bikes seized by police

ದಾವಣಗೇರಿ ನಗರದ ನಿಟ್ಟವಳ್ಳಿಯ ಷಣ್ಮುಖ ತಂದೆ ಕೆ.ಜೆ. ಮರಳಸಿದ್ದಪ್ಪ ಎಂಬ ವ್ಯಕ್ತಿ, ದಾವಣಗೇರಿ ನಗರದಲ್ಲಿ ಎರಡು ಹಾಗೂ ಹರಿಹರದಲ್ಲಿ ಎರಡು ಸೇರಿದಂತೆ ಒಟ್ಟು 3,50,000 ರೂ.ಗಳ 6 ಬೈಕ್​​ಗಳ ಕಳ್ಳತನ ಮಾಡಿದ್ದಾನೆ.

ಅಂತರ್​ಜಿಲ್ಲಾ ಬೈಕ್ ಕಳ್ಳನ ಬಂಧನ
ಅಂತರ್​ಜಿಲ್ಲಾ ಬೈಕ್ ಕಳ್ಳನ ಬಂಧನ
author img

By

Published : Dec 20, 2020, 7:27 PM IST

ರಾಣೆಬೆನ್ನೂರು: ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ರಾಣೆಬೆನ್ನೂರು ಶಹರ ಠಾಣೆಯ ಪೊಲೀಸರು ಬಂಧಿಸಿದ್ದು, ಆತನಿಂದ 3.5 ಲಕ್ಷ ರೂ. ಮೌಲ್ಯದ 6 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ದಾವಣಗೇರಿ ನಗರದ ನಿಟ್ಟವಳ್ಳಿಯ ಷಣ್ಮುಖ ತಂದೆ ಕೆ.ಜೆ. ಮರಳಸಿದ್ದಪ್ಪ (40) ಎಂದು ಗುರುತಿಸಲಾಗಿದೆ. ಈತನನ್ನು ಡಿ.19 ರಂದು ಶಹರದ ಹೊರ ವಲಯದಲ್ಲಿ ಬಂಧಿಸಲಾಗಿದೆ.

ಬಂಧಿತ ಆರೋಪಿಯು ದಾವಣಗೇರಿ ನಗರದಲ್ಲಿ ಎರಡು ಹಾಗೂ ಹರಿಹರದಲ್ಲಿ ಎರಡು ಸೇರಿದಂತೆ ಒಟ್ಟು 3,50,000 ರೂ.ಗಳ 6 ಬೈಕ್​​ಗಳನ್ನು ಕಳ್ಳತನ ಮಾಡಿದ್ದಾನೆ. ಜನದಟ್ಟಣೆಯ ಪ್ರದೇಶದಲ್ಲಿ ನಿಲ್ಲಿಸಿದ ಬೈಕ್​ಗಳ ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿ ಈ ಹಣದಲ್ಲಿ ಸಾರಾಯಿ ಕುಡಿತ, ಜೂಜಾಟ, ಓಸಿ ಆಡುವುದನ್ನು ರೂಢಿಗತ ಮಾಡಿಕೊ‌ಂಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಓದಿ: ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ : ಸ್ಥಳದಲ್ಲೇ ಮೃತಪಟ್ಟ ಸವಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.