ಹಾವೇರಿ: ಶನಿವಾರದಿಂದ ಹಾವೇರಿ ಜಿಲ್ಲೆಯಲ್ಲಿ ಲಾಕ್ ಡೌನ್ ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಬೇರೆ ಜಿಲ್ಲೆಗಳಿಗೆ ಕಾರ್ಯನಿಮಿತ್ತ ಹೋಗಿದ್ದ ಕಾರ್ಮಿಕರಿಗೆ ಜಿಲ್ಲೆಗೆ ಬರಲು ಅವಕಾಶ ನೀಡಲಾಗಿದೆ.
ಸಾರಿಗೆ ಬಸ್‌ನಲ್ಲಿ 21 ಜನರನ್ನ ಕರೆದುಕೊಂಡು ಬರಲಾಗುತ್ತಿದೆ. ಈ ರೀತಿ ಕರೆದುಕೊಂಡು ಬಂದ 84 ಜನರನ್ನು ಹಾವೇರಿ ಕೆಇಬಿ ಸಭಾ ಭವನದಲ್ಲಿನ ಫಿವರ್ ಕ್ಲಿನಿಕ್ನಲ್ಲಿ ಚೆಕ್ ಮಾಡಲಾಗುತ್ತಿದೆ. ಸ್ಕ್ರೀನಿಂಗ್ ನಂತರ ಕೆಇಬಿ ಸಭಾ ಭವನದಲ್ಲಿ 14 ದಿನಗಳವರೆಗೆ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.
14 ದಿನಗಳವರೆಗೆ ಯಾವುದೇ ರೀತಿಯ ರೋಗ ಲಕ್ಷಣಗಳು ಕಾಣದಿದ್ದರೆ ಅವರನ್ನು ಅವರ ಗ್ರಾಮಕ್ಕೆ ಕಳಿಸಿಕೊಡಲಾಗುತ್ತದೆ.