ETV Bharat / state

ಕೋವಿಡ್​​ 3ನೇ ಅಲೆ: ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದು

ಕೊರೊನಾ 3ನೇ ಅಲೆ ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆ ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದುಪಡಿಸುತ್ತಿರುವುದಾಗಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ತಿಳಿಸಿದ್ದಾರೆ.

Haveri Hukkeri math
ಹಾವೇರಿ ಹುಕ್ಕೇರಿ ಮಠ
author img

By

Published : Jan 7, 2022, 9:06 AM IST

ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಮತ್ತು 'ಆರಂಭಿಕ ಜಾತ್ರೆ' ಎಂದೇ ಕರೆಯಲ್ಪಡುವ ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದಾಗಿದೆ. ಈ ಕುರಿತಂತೆ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ರದ್ದು: ಸದಾಶಿವ ಶ್ರೀ ಸ್ಪಷ್ಟನೆ

ಕೊರೊನಾ 3ನೇ ಅಲೆ ಮತ್ತು ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾತ್ರೆ, ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ರದ್ದುಪಡಿಸಿ ಆದೇಶಿಸಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಜಾತ್ರೆ ರದ್ದುಪಡಿಸುತ್ತಿರುವದಾಗಿ ಶ್ರೀಗಳು ತಿಳಿಸಿದ್ದಾರೆ.

ಜ. 8 ರಿಂದ 12 ರವರೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಆದರೆ, ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶಾನುಸಾರ ಈ ಕಾರ್ಯಕ್ರಮಗಳನ್ನ ರದ್ದುಪಡಿಸಲಾಗಿದೆ. ಹಾಗಾಗಿ ಸಮಸ್ತ ಭಕ್ತವೃಂದ ಸಹಕರಿಸುವಂತೆ ಶ್ರೀಗಳು ಮನವಿ ಮಾಡಿದ್ದಾರೆ.

ಜ.13 ರಂದು ಹುಕ್ಕೇರಿ ಮಠದ ಲಿಂಗೈಕ್ಯ ಶ್ರೀಗಳಾದ ಶಿವಬಸವೇಶ್ವರ ಮತ್ತು ಶಿವಲಿಂಗ ಶ್ರೀಗಳ ಭಾವಚಿತ್ರದ ಮೆರವಣಿಗೆ ಸಹ ರದ್ದುಪಡಿಸಲಾಗಿದೆ. ಆದರೆ ಆ ದಿನ ಭಕ್ತರಿಗೆ ಉಭಯ ಶ್ರೀಗಳ ಗದ್ದುಗೆ ದರ್ಶನ ಮತ್ತು ಪ್ರಸಾದ ವ್ಯವಸ್ಷೆ ಇರುತ್ತದೆ. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯಲ್ಲಿ ನಿಂತು ಶ್ರೀಗಳ ಗದ್ದುಗೆ ದರ್ಶನ ಪಡೆಯುವಂತೆ ಶ್ರೀಗಳು ತಿಳಿಸಿದ್ದಾರೆ.

ಕ್ರೀಡಾ ಸಲಕರಣೆ ಮಾಲೀಕರಿಗೆ ಸಂಕಷ್ಟ:

ಇತ್ತ ಜಾತ್ರೆ ರದ್ದಾಗಿರುವುದು ಕ್ರೀಡಾ ಸಲಕರಣೆ ಮಾಲೀಕರಿಗೆ ಇನ್ನಿಲ್ಲದ ಬೇಸರ ತರಿಸಿದೆ. ಕಳೆದ ವರ್ಷ ಕಡಿಮೆ ಲಾಭದಿಂದ ಕಂಗೆಟ್ಟು, ಈ ವರ್ಷವಾದರೂ ಅಧಿಕ ಲಾಭ ಸಿಗಬಹುದು ಎನ್ನುವ ಆಸೆಯಿಂದ ದೂರದ ವಿಜಾಪುರದಿಂದ ಲಕ್ಷಾಂತರ ರೂ.ಖರ್ಚು ಮಾಡಿ ಕ್ರೀಡಾ ಸಲಕರಣಿಗಳನ್ನು ತಂದಿದ್ದೇವೆ. ಜಾತ್ರೆ 5 ದಿನಗಳು ಬಾಕಿ ಇರುವಾದ ಕ್ರೀಡಾ ಸಲಕರಣಿಗಳನ್ನು ಜೋಡಿಸಲು ಆರಂಭಿಸಿದ್ದೇವೆ. ಆದರೆ, ಈಗ ಸರ್ಕಾರ ಏಕಾಏಕಿ ಜಾತ್ರೆ ರದ್ದುಪಡಿಸಿದ್ದು ತಮಗೆ ಇನ್ನಿಲ್ಲದ ಸಂಕಷ್ಟ ತಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರತಿ ವರ್ಷ ನಾವು ಹುಕ್ಕೇರಿ ಮಠದ ಜಾತ್ರೆಯಿಂದಲೇ ನಮ್ಮ ಜೀವನೋಪಾಯ ಕಂಡುಕೊಳ್ಳುತ್ತಿದ್ದೇವೆ. ಆದರೆ, ಈ ವರ್ಷದ ಆರಂಭಿಕ ಜಾತ್ರೆ ರದ್ದಾಗಿರುವದು ತಮ್ಮನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಹತ್ತಾರು ಕೂಲಿ ಕಾರ್ಮಿಕರು, ಚಿಕ್ಕಮಕ್ಕಳನ್ನ ಕಟ್ಟಿಕೊಂಡು ಜಾತ್ರೆಗೆ ಬಂದಿದ್ದೇವೆ. ಸರ್ಕಾರದ ಈ ನಿರ್ಧಾರ ತಮಗೆ ನೋವು ತಂದಿದೆ. ಸರ್ಕಾರ ನಮ್ಮಂತಹವರಿಗೆ ಈ ಸಂದರ್ಭದಲ್ಲಿ ನೆರವು ನೀಡಬೇಕು ಎಂದು ಮಾಲೀಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಪೊಲೀಸರ ದೌರ್ಜನ್ಯ ಆರೋಪ: ಆತ್ಮಹತ್ಯೆಗೆ ಶರಣಾದ ದಲಿತ ಯುವಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.